ಅಂಗವಿಕಲರ ಬೆಂಬಲಕ್ಕಾಗಿ ವಿದ್ಯಾರ್ಥಿಗಳು

7
ಅಂಗವಿಕಲರ ಗೌರವಿಸುವ ಹಾಗೂ ಬೆಂಬಲಿಸುವ ವಿಶಿಷ್ಟ ಕಾರ್ಯಾಗಾರದಲ್ಲಿ ಪ್ರಾರ್ಥನಾ ಹೇಳಿಕೆ

ಅಂಗವಿಕಲರ ಬೆಂಬಲಕ್ಕಾಗಿ ವಿದ್ಯಾರ್ಥಿಗಳು

Published:
Updated:
Deccan Herald

ತುಮಕೂರು: ಅಂಗವಿಕಲರಿಗೆ ಅನುಕಂಪ ತೋರಿಸುವುದಕ್ಕಿಂತ ಅವರ ಸ್ವಾಭಿಮಾನವನ್ನು ಗೌರವಿಸಿ ಸಹಜ ಬಾಳ್ವೆ ನಡೆಸಲು ಬೆಂಬಲ ಮತ್ತು ಪ್ರೋತ್ಸಾಹ ನೀಡಿ ಸ್ವಯಂಸೇವಕರನ್ನಾಗಿ ಮಾಡಬೇಕು ಎಂದು ಬೆಂಗಳೂರಿನ ಸ್ವಯಂಸೇವಾ ಸಂಸ್ಥೆ ‘ಗಿಫ್ಟ್‌ ಏಬಲ್‌’ನ ತಂಡದ ಸದಸ್ಯೆ ಪ್ರಾರ್ಥನಾ ತಿಳಿಸಿದರು.

ನಗರದ ಸಪ್ತಗಿರಿ ಪದವಿಪೂರ್ವ ಕಾಲೇಜಿನ ಸಂಸ್ಥಾಪಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಅಂಗವಿಕಲರನ್ನು ಗೌರವಿಸುವ ಹಾಗೂ ಬೆಂಬಲಿಸುವ ವಿಶಿಷ್ಟ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೈಕಾಲುಗಳ ಸ್ವಾಧೀನವಿಲ್ಲದಿರುವ ಹಾಗೂ ಪೂರ್ಣ ಬೆಳವಣಿಗೆ ಇಲ್ಲದಿರುವವರು ವೀಲ್‌ ಚೇರ್‌ನಲ್ಲಿ ಚಲಿಸುವುದು ತುಂಬ ಕಷ್ಟಕರ. ಹಾಗಾಗಿ ಅಂಗವಿಕಲರ ಬೆಂಬಲಕ್ಕಾಗಿ ವಿದ್ಯಾರ್ಥಿಗಳು ನಿಯಮಿತವಾಗಿ ಕೆಲ ಸಮಯವನ್ನು ಮೀಸಲಿಟ್ಟು ಸಹಜ ಜೀವನ ನಡೆಸಲು ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಉಪನ್ಯಾಸಕಿ ಅರ್ಚನಾ ಎಸ್‌ ಕುಮಾರ್ ಅವರು, ’ಸಪ್ತಗಿರಿ ಪದವಿ ಪೂರ್ವ ಕಾಲೇಜು ಆರಂಭವಾಗಿ 15 ವರ್ಷ ಯಶಸ್ವಿಯಾಗಿ ಪೂರೈಸಿದೆ ಇದಕ್ಕೆ ಸಂಸ್ಥೆಯ ಅಧ್ಯಕ್ಷ ಡಿ.ಎಸ್.ಕುಮಾರ್ ಅವರ ಪರಿಶ್ರಮದಿಂದ ಸಾಧ್ಯವಾಗಿದೆ’ ಎಂದರು.

ಉಪನ್ಯಾಸಕಿ ಆರ್.ಅಶ್ವಿನಿ ಅವರ ಮಾರ್ಗದರ್ಶನದಲ್ಲಿ ಪರಿಸರ ಹಾಗೂ ಕೃಷಿಸ್ನೇಹಿ ‘ಇಕೋ ಕ್ಲಬ್’ಅನ್ನು ಉದ್ಘಾಟಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಡಿ.ಎಸ್.ಕುಮಾರ್, ಕಾರ್ಯದರ್ಶಿ ಪದ್ಮ ರೇಖಾ, ಪ್ರಾಂಶುಪಾಲ ಡಾ.ಎಚ್.ಎಸ್.ನಿರಂಜನಾರಾಧ್ಯ, ವಿದ್ಯಾಧಿಕಾರಿ ಚೆನ್ನಪ್ಪ ಬಾರಿಗಿಡದ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೃಣಾಲ್ ಕುಮಾರ್‌, ಗಿಫ್ಟ್‌ಏಬಲ್ ತಂಡದ ಸದಸ್ಯರಾದ ಪ್ರತೀಕ್, ದೀಕ್ಷಿತಾ, ಶೈಲಜಾ, ಚೈತ್ರ, ಸುನಿಲ್, ಕೃಷ್ಣಕುಮಾರ್ ಹಾಗೂ ಸಿಂಧು ಇದ್ದಾರೆ.

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !