ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಗ್ರಾಮಾಂತರದಲ್ಲಿ ಗರಿಷ್ಠ ಮತದಾನ; ನಗರದಲ್ಲಿ ಕನಿಷ್ಠ

ಲೋಕಸಭಾ ಕ್ಷೇತ್ರ: 120 ಲೈಂಗಿಕ ಅಲ್ಪಸಂಖ್ಯಾತರ ಪೈಕಿ ಮತದಾನ ಮಾಡಿದವರು 14 ಮಂದಿ ಮಾತ್ರ
Last Updated 20 ಏಪ್ರಿಲ್ 2019, 12:35 IST
ಅಕ್ಷರ ಗಾತ್ರ

ತುಮಕೂರು: ಈ ಬಾರಿ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 4.51ರಷ್ಟು ಹೆಚ್ಚು ಮತದಾನವಾಗಿದೆ. ಕಳೆದ ಬಾರಿಗೆ ಶೇ 72.50 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ 77.03ರಷ್ಟು ಮತದಾನವಾಗಿದೆ. ಹಿಂದಿನ ಬಾರಿಗೆ ಹೋಲಿಸಿದರೆ ಮತದಾನ ಪ್ರಮಾಣ ಸ್ವಲ್ಪ ಹೆಚ್ಚಳವಾಗಿದೆ.

ಗುರುವಾರ ನಡೆದ ಚುನಾವಣೆಯಲ್ಲಿ ಇಡೀ ಕ್ಷೇತ್ರದಲ್ಲಿ ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ಶೇ 81.87 ರಷ್ಟು ಮತದಾನ ದಾಖಲಾಗುವ ಮೂಲಕ ಮೊದಲ ಸ್ಥಾನದಲ್ಲಿದೆ. ಅತೀ ಕನಿಷ್ಠ ಮತದಾನ ಶೇ 65.42ರಷ್ಟು ತುಮಕೂರು ನಗರ ವಿಧಾನ ಸಭಾ ಕ್ಷೇತ್ರದಲ್ಲಾಗಿದ್ದು, ಗರಿಷ್ಠ ಮತ್ತು ಕನಿಷ್ಠ ಮತದಾನ ದಾಖಲಾದ ಈ ಎರಡೂ ಕ್ಷೇತ್ರಗಳೂ ತುಮಕೂರು ತಾಲ್ಲೂಕಿನದ್ದೇ ಆಗಿವೆ.

ಕ್ಷೇತ್ರದ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 9 ಗಂಟೆಗೆ ಶೇ 7.39, 11ಕ್ಕೆ 22.51, 3 ಗಂಟೆಗೆ 54.88, 5 ಗಂಟೆಗೆ 70.28 ಹಾಗೂ 6 ಗಂಟೆಗೆ ಶೇ 77.03 ಮತದಾನ ಆಗಿದ್ದು, ಆರಂಭದಿಂದಲೂ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮತದಾನ ಚುರುಕು ಪಡೆದುಕೊಂಡಿತ್ತು.

ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8,03,006 ಪುರುಷ, 8,04,874 ಮಹಿಳಾ ಮತ್ತು 120 ಲೈಂಗಿಕ ಅಲ್ಪಸಂಖ್ಯಾತರು ಸೇರಿ ಒಟ್ಟು 16.08 ಲಕ್ಷ ಮತದಾರರಿದ್ದಾರೆ. ಇವರಿಗೆ ಮತದಾನಕ್ಕಾಗಿ ಜಿಲ್ಲಾ ಚುನಾವಣಾಧಿಕಾರಿ ಕಚೇರಿ 2684 ಮತಗಟ್ಟೆಗಳನ್ನು ಸಜ್ಜುಗೊಳಿಸಿತ್ತು. ಕ್ಷೇತ್ರದಲ್ಲಿನ ಒಟ್ಟು ಮತದಾರರ ಪೈಕಿ 6,29,248 ಪುರುಷ, 6,09,362 ಮಹಿಳಾ ಮತ್ತು 14 ಲೈಂಗಿಕ ಅಲ್ಪಸಂಖ್ಯಾತ ಮತದಾರರು ಮತ ಚಲಾಯಿಸಿದ್ದಾರೆ.

2014ರಲ್ಲಿ ಲೈಂಗಿಕ ಅಲ್ಪಸಂಖ್ಯಾತ ಮತದಾರರು 118 ಮಂದಿ ಇದ್ದರು. ಇದರಲ್ಲಿ 12 ಮಂದಿ ಮತ ಚಲಾಯಿಸಿದ್ದರು. ಈ ಬಾರಿ ಕ್ಷೇತ್ರದಲ್ಲಿ 120 ಲೈಂಗಿಕ ಅಲ್ಪಸಂಖ್ಯಾತ ಮತದಾರರಿದ್ದು, ಇದರಲ್ಲಿ 14 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ.

ಕ್ಷೇತ್ರದ ಹಿಂದಿನ ಮತ್ತು ಇಂದಿನ ಮತದಾರರ ವಿವರ

ಕ್ಷೇತ್ರ 2014 2019
ಚಿಕ್ಕನಾಯಕನಹಳ್ಳಿ 72.59 78.12
ತಿಪಟೂರು 74.18 80.27
ತುರುವೇಕೆರೆ 69.96 80.00
ತುಮಕೂರುನಗರ 63.11 65.42
ತುಮಕೂರು ಗ್ರಾಮಾಂತರ 78.07 81.87
ಕೊರಟಗೆರೆ 76.89 79.67
ಗುಬ್ಬಿ 77.30 80.29
ಮಧುಗಿರಿ 70.59 74.38

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT