ಬೆಂಕಿ ಇಡುವವರು ಒಮ್ಮೊಮ್ಮೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದರೂ ಅವರ ವಿರುದ್ಧ ಕಾನೂನಿನ ಕ್ರಮ ಜರುಗಿಸದಿರುವುದು ಗುಡ್ಡಗಳಿಗೆ ಬೆಂಕಿ ಹಚ್ಚುವವರಿಗೆ ಇಂಬು ನೀಡಿದಂತಾಗಿದೆ
ಮಹಮದ್ ಹುಸೇನ್ ಚಿಕ್ಕನಾಯಕನಹಳ್ಳಿ
ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಬದಿ ನೆಟ್ಟಿದ್ದ ಸಾಲು ಗಿಡಗಳು ಕಳೆದ ವರ್ಷ ಬೆಂಕಿಗೆ ಆಹುತಿಯಾಗಿದ್ದವು. ಅರಣ್ಯ ಇಲಾಖೆ ಗಿಡಗಳ ಸುತ್ತ ಬೆಳೆದಿರುವ ಹುಲ್ಲು ತೆರವುಗೊಳಿಸಿ ಮುಂದೆ ಸಂಭವಿಸುವ ಬೆಂಕಿ ಅನಾಹುತ ತಪ್ಪಿಸಬೇಕು
ಡಿ.ಯೋಗೀಶ್ ಕಂಪನಹಳ್ಳಿ ತೋಟದಮನೆ
ಗುಡ್ಡಗಳಿಗೆ ಬೆಂಕಿಯಿಡುವ ಸಂಸ್ಕೃತಿಯಿಂದ ತೊಂದರೆಯಾಗುತ್ತಿದೆ. ಸರ್ಕಾರ ವಿಮಾನಗಳ ಮೂಲಕ ನೀರು ಸುರಿದು ಬೆಂಕಿ ನಂದಿಸುವ ಯೋಜನೆ ಅಳವಡಿಸಿದರೆ ಹೆಚ್ಚು ಪರಿಣಾಮಕಾರಿ
ಬಿ.ಎನ್.ಲೋಕೇಶ್ ಬಡಕೇಗುಡ್ಲು
ಈ ಬಾರಿ ಸೆಪ್ಟಂಬರ್ ಅಕ್ಟೋಬರ್ ತಿಂಗಳಲ್ಲಿಯೇ ಕೆಲ ಗುಡ್ಡಗಳು ಹೊತ್ತಿ ಉರಿದವು. ಪರಿಸರಾಸಕ್ತರು ಹಾಗೂ ಅರಣ್ಯ ಇಲಾಖೆ ಗುಡ್ಡಗಾಡುಗಳ ಅಕ್ಕಪಕ್ಕದ ಗ್ರಾಮಗಳಿಗೆ ತೆರಳಿ ಬೆಂಕಿಯಿಂದ ಆಗುವ ಅನಾಹುತಗಳ ಬಗ್ಗೆ ಜಾಗೃತಿ ಮೂಡಿಸಬೇಕು
ರಾಮಕೃಷ್ಣಪ್ಪ ನಿವೃತ್ತ ಶಿಕ್ಷಕ ಯಗಚಿಹಳ್ಳಿ
ಚಿಕ್ಕನಾಯಕನಹಳ್ಳಿ ಮದಲಿಂಗನ ಕಣಿವೆ ಸುಂದರ ಪರಿಸರ ತಾಣವಾಗಿದ್ದು ಹೆಚ್ಚು ಜನರು ಸಂಚರಿಸುತ್ತಾರೆ. ಈ ವೇಳೆ ಸಾರ್ವಜನಿಕರು ಬೆಂಕಿ ಅವಘಡಗಳಿಗೆ ಅಸ್ಪದ ನೀಡಬಾರದು