ಶರಣರಿಗೆ ಕಾಯಕ, ದಾಸೋಹವೇ ಉಸಿರು

7
ನಗರದಲ್ಲಿ ನಡೆದ ಸಿದ್ಧವೀರಮ್ಮ ನಂಜಣ್ಣ ಬಸವರಾಜಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ತಗಡೂರು ವೀರಭದ್ರಪ್ಪ ಅಭಿಪ್ರಾಯ

ಶರಣರಿಗೆ ಕಾಯಕ, ದಾಸೋಹವೇ ಉಸಿರು

Published:
Updated:
Prajavani

ತುಮಕೂರು: 12 ನೇ ಶತಮಾನದಲ್ಲಿ ಶರಣರು ತಮ್ಮ ಜೀವಮಾನ ಪರ್ಯಂತ ಆಚಾರನಿಷ್ಠರಾಗಿ ಬದುಕನ್ನು ಕಟ್ಟಿಕೊಂಡಿದ್ದರು. ಹಾಗೇ ಶರಣ ಶರಣೆಯರಿಗೆ ಕಾಯಕ ಮತ್ತು ದಾಸೋಹಗಳು ಬದುಕಿನ ಉಸಿರಾಗಿದ್ದವು ಎಂದು ನಿವೃತ್ತ ಉಪನ್ಯಾಸಕ ತಗಡೂರು ವೀರಭದ್ರಪ್ಪ ನುಡಿದರು.

ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಾಗೂ ಬಸವೇಶ್ವರ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ನಡೆದ ಸಿದ್ಧವೀರಮ್ಮ ನಂಜಣ್ಣ ಬಸವರಾಜಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಶರಣರ ಕಾಯಕ- ದಾಸೋಹ’ ವಿಷಯ ಕುರಿತು ಮಾತನಾಡಿದರು. 

ಇಂದು ಸಮಾಜ ಆಧುನಿಕತೆಯಲ್ಲಿದ್ದೂ ವೈಜ್ಞಾನಿಕ ವಿಚಾರ ಮಾಡಿದರೂ ಕೂಡ ಸರ್ಕಾರಗಳ ಅವೈಜ್ಞಾನಿಕ ಚಿಂತನೆಗಳಿಂದ ಜನರನ್ನು ಸೋಮಾರಿಗಳನ್ನಾಗಿಸಿವೆ ಎಂದು ವಿಷಾದಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಜಿ.ಮಲ್ಲಿಕಾರ್ಜುನಯ್ಯ, ಯುವಜನರಲ್ಲಿ ಸಂಸ್ಕಾರ ರೂಢಿಸುವ ಚಿಂತನೆಗಳನ್ನು ಹಿರಿಯರು ಕಲಿಸಬೇಕಾಗಿದೆ ಎಂದರು.

ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಲೋಕೇಶ್ವರಿಪ್ರಭು ಅವರು, ಸುತ್ತೂರಿನ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ 34 ವರ್ಷಗಳ ಹಿಂದೆ ಸ್ಥಾಪಿಸಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶಗಳನ್ನು ವಿವರಿಸಿ, ಇಂದು ರಾಜ್ಯದಾದ್ಯಂತ 750ಕ್ಕೂ ಹೆಚ್ಚು ದತ್ತಿಗಳು ಶರಣರ ಜೀವನ, ಸಾಹಿತ್ಯ ಪ್ರಸಾರ ಮಾಡುತ್ತಿವೆ’ ಎಂದು ಆಶಯ ವ್ಯಕ್ತಪಡಿಸಿದರು.

ದತ್ತಿದಾನಿ ಜಿ.ಎನ್. ಬಸವರಾಜಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ.ಸಿದ್ಧರಾಮಯ್ಯ ಮಾತನಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !