ಕವಿಗೆ ಸಾಮಾಜಿಕ ಪ್ರಜ್ಞೆ ಇರಲಿ

5
ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಎನ್.ನಾಗಪ್ಪ ಹೇಳಿಕೆ

ಕವಿಗೆ ಸಾಮಾಜಿಕ ಪ್ರಜ್ಞೆ ಇರಲಿ

Published:
Updated:
Deccan Herald

ತುಮಕೂರು:ಕವಿಯಾದವರು ಮನುಷ್ಯರನ್ನು ಮನುಷ್ಯರಂತೆ ಕಾಣುವ ಗುಣ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಎನ್.ನಾಗಪ್ಪ ತಿಳಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಸ್ನೇಹ ಕ್ರೀಡಾ ಮತ್ತು ಸಾಂಸ್ಕೃತಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ಆಶಯ ನುಡಿಗಳನ್ನಾಡಿದ ಅವರು, ಯಾವುದೇ ಕವಿಗೆ ಅಕ್ಷರದ ಅಹಂಕಾರ ಇರಬಾರದು ಜೊತೆಗೆ ವಿನಯವಂತಿಕೆ ಇರಬೇಕು ಎಂದರು.

ಕವಿಗೆ ಸಾಮಾಜಿಕ ಪ್ರಜ್ಞೆ ಮತ್ತು ಬದ್ದತೆ ಇರಬೇಕು. ಜೊತೆಗೆ ವಾಸ್ತವದ ನೆಲೆಗಟ್ಟಿನಲ್ಲಿ ವೈಜ್ಞಾನಿಕವಾಗಿ ವೈಚಾರಿಕವಾಗಿ ಬರೆಯವ ಕಲೆಯುನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕವಿ ಎಷ್ಟು ಬರೆದೆ ಎನ್ನುವುದಕ್ಕಿಂತ ಏನನ್ನು ಬರೆದೆ ಎಂಬುದು ಮುಖ್ಯವಾಗುತ್ತದೆ. ಹಾಗಾಗಿ ಕವಿ ಬದುಕಿ ಬರೆಯಬೇಕು. ಪಂಚ ಮತ್ತು ವಚನಕಾರರು ಬದುಕಿ ಬರೆದರು. ಆದ್ದರಿಂದ ಹತ್ತನೇ ಶತಮಾನ ಮತ್ತು ಹನ್ನೊಂದನೇ ಶತಮಾನದ ಸಾಹಿತ್ಯ ಗಟ್ಟಿತನದಿಂದ ಕೂಡಿದೆ. ಹಾಗಾಗಿ ಕವಿಗಳು ವಚನಕಾರರಂತೆ ಬದುಕಿ ಬರೆಯಬೇಕು ಎಂದು ಕಿವಿಮಾತು ಹೇಳಿದರು.

ಜಾತಿ, ಧರ್ಮದ ಗೋಡೆಗಳನ್ನು ಮುರಿದು ಪ್ರೀತಿಯಿಂದ ಬದುಕಬೇಕು ಎಂಬ ಮಹತ್ವದ ಆಶಯಯಿಂದ ಕವಿಗಳ ಮನಸ್ಸನ್ನು ಕಟ್ಟಿಕೊಡಬೇಕು.ಬುದ್ದ ಅರಮನೆಯನ್ನು ತೊರೆದು ಜನರನ್ನು ಭೇಟಿಯಾಗಿ ಅವರ ಸಂಕಟಗಳನ್ನು ಅರ್ಥಮಾಡಿಕೊಂಡ. ಆದ್ದರಿಂದ ಜಗತ್ತಿನಾದ್ಯಂತ ಆತನ ವಿಚಾರಗಳು ಹರಡಿಕೊಂಡಿವೆ ಎಂದರು.

ಲೇಖಕ ರವೀಂದ್ರನಾಥ್ ಟ್ಯಾಗೂರ್ ಅವರು ಮಾತನಾಡಿ, ’ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ವ್ಯವಸ್ಥೆ ಬದಲಾಗಿಲ್ಲ. ಜಾತಿ ವ್ಯವಸ್ಥೆ ಸೇರಿದಂತೆ ರಾಜಕಾರಣಿಗಳು ಹಾಗೆಯೇ ಇದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಕವಿಗೋಷ್ಠಿಯಲ್ಲಿ ಲೇಖಕ ಈಚನೂರು ಇಸ್ಮಾಯಿಲ್, ಕವಿಗಳಾದ ಎಂ.ಸಿ.ಲಲಿತಾ, ಅಬ್ಬಿನಹೊಳೆ ಸುರೇಶ್, ಮುದೇನೂರು ನಂಜಪ್ಪ ಕುಲಕರ್ಣಿ, ಇಂದಿರಾ ಸಣ್ಣಮುದ್ದಯ್ಯ, ಗಂಗಾಧರ್ ಕೊಡ್ಲಿ, ಸಿರಿವರ ಶಿವರಾಮಯ್ಯ, ಸಾಗ್ಗೆರೆ ಮಲ್ಲಿಕಾರ್ಜುನ ಕವನ ವಾಚಿಸಿದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !