ಮಂಗಳವಾರ, ಡಿಸೆಂಬರ್ 6, 2022
21 °C
ಜೂನಿಯರ್‌ ಕಾಲೇಜು ಮೈದಾನದಲ್ಲಿ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ

ಕನ್ನಡ ರಾಜ್ಯೋತ್ಸವ: 41 ಸಾಧಕರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರನ್ನು ಜಿಲ್ಲಾಡಳಿತದಿಂದ ಗೌರವಿಸಿ ಸನ್ಮಾನಿಸಲಾಗುತ್ತಿದೆ. ಈ ಬಾರಿ 41 ಸಾಧಕರನ್ನು ಸನ್ಮಾನಕ್ಕೆ ಆಯ್ಕೆ ಮಾಡಲಾಗಿದೆ.

ನ. 1ರಂದು ಸಂಜೆ 4 ಗಂಟೆಗೆ ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಭಿನಂದಿಸಲಾಗುತ್ತದೆ.

ಸಾಧಕರ ಪಟ್ಟಿ ಕೆಳಗಿನಂತಿದೆ.

ರಂಗಭೂಮಿ: ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಹೆಂಡನಹಳ್ಳಿ ಎಚ್.ಟಿ.ದಾಸಪ್ಪ, ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಹೋಬಳಿ ಬಸವನಹಳ್ಳಿ ಎಲ್.ಎಚ್.ರಂಗನಾಥಪ್ಪ, ತುಮಕೂರು ತಾಲ್ಲೂಕು ಪೆರಮನಹಳ್ಳಿ ಗಂಗಣ್ಣ, ತುಮಕೂರಿನ ಟಿ.ಸಿ.ಹನುಮಂತರಾಜು, ಹುಳಿಯಾರು ಪಟ್ಟಣದ ಜಿ.ಮಲ್ಲಿಕಾರ್ಜುನಯ್ಯ, ತುಮಕೂರಿನ ಜಿ.ಸಿ.ಕುಮಾರಸ್ವಾಮಿ.

ಜಾನಪದ: ಪಾವಗಡ ತಾಲ್ಲೂಕು ಕರಿಯಮ್ಮನಪಾಳ್ಯ ಆರ್.ಎನ್.ಲಿಂಗಪ್ಪ, ತುರುವೇಕೆರೆ ತಾಲ್ಲೂಕು ವಿವೇಕಾನಂದನಗರದ ಎಂ.ಬಿ.ಬಸವಾಚಾರ್, ತಿಪಟೂರು ತಾಲ್ಲೂಕು ಅರಳಗುಪ್ಪೆ ಗ್ರಾಮದ ಎ.ಆರ್.ಪುಟ್ಟಸ್ವಾಮಿ, ಗುಬ್ಬಿ ತಾಲ್ಲೂಕು ಉದ್ದೆಹೊಸಕೆರೆ ತಿಮ್ಮಯ್ಯ.

ಪತ್ರಿಕೋದ್ಯಮ: ಕುಣಿಗಲ್ ಎಂ.ಡಿ.ಮೋಹನ್, ಹುಳಿಯಾರು ಆರ್.ಸಿ.ಮಹೇಶ್, ತುಮಕೂರಿನ ಟಿ.ಎಸ್.ಕೃಷ್ಣಮೂರ್ತಿ, ಕೆ.ಎ.ರಾಜೇಂದ್ರ ಕುಮಾರ್, ಕೊರಟಗೆರೆ ವಿ.ಎನ್.ಉಮಾಶಂಕರ್.

ಸಂಗೀತ– ನೃತ್ಯ: ಮಧುಗಿರಿ ತಾಲ್ಲೂಕು ವಿನಾಯಕ ನಗರ ಲಾಲಿತ್ಯ ಸಂಗೀತ ಶಾಲೆಯ ಎಲ್‌.ಲಲಿತಾಂಬ, ತುಮಕೂರಿನ ಸಿದ್ದಲಿಂಗಯ್ಯ ಹಿರೇಮಠ್.

ಸಮಾಜ ಸೇವೆ: ತುಮಕೂರಿನ ಬಿ.ಎಚ್.ಸುನಂದ, ಕೆ.ವಿ.ಗುರುಪ್ರಸಾದ್, ತಿಪಟೂರಿನ ಎಂ.ಎಸ್.ಸ್ವರ್ಣಗೌರಿ, ಕುಣಿಗಲ್ ತಾಲ್ಲೂಕು ವಾಣಿಗೆರೆ ಸಂತ ಗ್ರಿಗೋರಿಯಸ್ ದಯಾಭವನ (ಸಂಸ್ಥೆ).

ಕ್ರೀಡೆ: ತುಮಕೂರಿನ ಪುಟ್ಟಸ್ವಾಮಿ, ಕೆ.ಎಚ್.ಪ್ರಜ್ವಲ್, ಟಿ.ಸಿ.ಮುಕ್ತಾಂಭ.

ಸಂಕೀರ್ಣ: ತುಮಕೂರಿನ ದಿನೇಶ್ ಬಾಬು, ಕೆ.ಎಸ್.ಉಮಾ ಮಹೇಶ್, ಸುನೀತಾ ಮೂರ್ತಿ, ಪ್ರೊ.ಕೆ.ಸಿದ್ಧಪ್ಪ.

ಸಾಹಿತ್ಯ: ತುಮಕೂರಿನ ಡಾ.ಪ್ರಕಾಶ್ ಕೆ.ನಾಡಿಗ್, ಎಂ.ವಿ.ಶಂಕರಾನಂದ.

ಶಿಕ್ಷಣ: ತುಮಕೂರಿನ ಕೆ.ವಿ.ಕೃಷ್ಣಮೂರ್ತಿ, ಲಕ್ಷ್ಮಮ್ಮ,

ವೈದ್ಯಕೀಯ: ತಿಪಟೂರಿನ ಡಾ.ಜಿ.ಎಸ್.ಶ್ರೀಧರ್, ತುಮಕೂರಿನ ಡಾ.ಬಿ.ನಂಜುಂಡಸ್ವಾಮಿ.

ಕನ್ನಡ ಪರ ಸಂಘಟನೆ: ತುಮಕೂರಿನ ವಿಷ್ಣುವರ್ಧನ್, ಜಿ.ಟಿ.ಯಲ್ಲೇಶ್ ಗೌಡ, ಸೋಮಶೇಖರ್, ಸಿ.ಪಿ.ಸುಧೀರ್.

ಕೃಷಿ: ತಿಪಟೂರಿನ ಬಸವರಾಜು, ಸಂಶೋಧನೆ: ಶಿರಾದ ಡಾ.ಎನ್.ನಂದಿಶ್ವರ, ಗಡಿನಾಡ ಸೇವೆ: ಮಧುಗಿರಿ ತಾಲ್ಲೂಕು ಮಿಡಿಗೇಶಿ ಎಂ.ಎನ್.ನರಸಿಂಹಮೂರ್ತಿ.

ಇಂದು ರಾಜ್ಯೋತ್ಸವ ಮೆರವಣಿಗೆ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಂಗಳವಾರ ತಾಯಿ ಭುವನೇಶ್ವರಿ ದೇವಿ ಪ್ರತಿಮೆಯ ಮೆರವಣಿಗೆ ನಡೆಯಲಿದೆ.

ಜಿಲ್ಲಾಧಿಕಾರಿ ಕಚೇರಿ ಬಳಿ ಬೆಳಿಗ್ಗೆ 7.30 ಗಂಟೆಗೆ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ತಳಿರು, ತೋರಣ, ಹೂವುಗಳಿಂದ ಸಿಂಗಾರಗೊಂಡ ಬೆಳ್ಳಿ ರಥದಲ್ಲಿ ಪ್ರತಿಮೆ ಸಾಗಲಿದೆ. ವಿವಿಧ ಕಲಾ ತಂಡಗಳು ಸಾಥ್‌ ನೀಡಲಿವೆ. ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಭಾಗವಹಿಸಲಿವೆ. ಮೆರವಣಿಗೆಯು ಬೆಳಿಗ್ಗೆ 9 ಗಂಟೆಯ ಒಳಗೆ ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನ ಸೇರಲಿದೆ.

ಜೂನಿಯರ್‌ ಕಾಲೇಜು ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಸದ ಜಿ.ಎಸ್.ಬಸವರಾಜು, ಮೇಯರ್‌ ಎಂ.ಪ್ರಭಾವತಿ ಭಾಗವಹಿಸಲಿದ್ದಾರೆ. ಶಾಸಕ ಜಿ.ಬಿ.ಜ್ಯೋತಿಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಧ್ವಜಾರೋಹಣದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು