ಮೈದುಂಬಿ ಹರಿದ ಮಲ್ಲಾಘಟ್ಟ ಕೆರೆ

7

ಮೈದುಂಬಿ ಹರಿದ ಮಲ್ಲಾಘಟ್ಟ ಕೆರೆ

Published:
Updated:
Deccan Herald

ತುರುವೇಕೆರೆ: ತಾಲ್ಲೂಕಿನ ಜನರ ಜೀವನಾಡಿ ಕರೆ ಎಂದು ಕರೆಯುವ ಮಲ್ಲಾಘಟ್ಟಕೆರೆ ಹೇಮಾವತಿ ನೀರಿನಿಂದ ಮೈದುಂಬಿ ಹರಿಯುತ್ತಿದೆ. ವಿಶಾಲವಾದ ಕೆರೆ ತುಂಬಿ ಹರಿಯುತ್ತಿರುವುದು ರೋಮಾಂಚನಗೊಳಿಸುತ್ತಿದೆ. ಮಲ್ಲಾಘಟ್ಟ ಗ್ರಾಮ ಮತ್ತು ಆಸುಪಾಸಿನ ಗ್ರಾಮಸ್ಥರು ಕೆರೆಯ ಈ ಮನೋಹರ ಸೊಬಗು ಕಣ್ತುಂಬಿಕೊಳ್ಳಲು ಹೆಚ್ಚು ಹೆಚ್ಚು ಬರುತ್ತಿದ್ದಾರೆ.

ಭಾನುವಾರದ ರಜಾ ದಿನದ ಕಾರಣ ಜನರು ಹೆಚ್ಚು ಬಂದರು. ಇಲ್ಲಿ ಸಂಜೆ ಸೂರ್ಯ ಅಸ್ತಂಗತವಾಗುವ ಸನ್ನಿವೇಶ ಮನಮೋಹಕವಾಗಿ ಇರುತ್ತದೆ. ಈ ವೇಳೆ ಇಡೀ ಕೆರೆಯೇ ಕೆಂಪು ಬಣ‍್ಣ ಮೈಮೇಲೆ ಹೊದ್ದಂತೆ ಕಂಗೊಳಿಸುತ್ತದೆ. ಈ ಸೌಂದರ್ಯವನ್ನು ಸವಿಯಲೆಂದು ಕೆರೆ ತುಂಬಿದ ವೇಳೆ ಜನರು ಕಿಕ್ಕಿರಿಯುವರು.

ತುರುವೇಕೆರೆ ತಾಲ್ಲೂಕು ಹಾಗೂ ಪಕ್ಕದ ತಾಲ್ಲೂಕುಗಳಿಂದಲೂ ಜಾತ್ರೆ, ಹಬ್ಬ, ಉತ್ಸವಗಳಲ್ಲಿ ದೇವರ ಗಂಗಾಸ್ನಾನ ಮಾಡಿಸಲು ದೂರದ ಊರುಗಳಿಂದ ಜನರ ಬರುವರು. 

ಪ್ರತಿ ವರ್ಷ ಈ ಕೆರೆಯು ಹೇಮಾವತಿ ನೀರಿನಿಂದ ತುಂಬಿ ಹರಿಯುತ್ತದೆ. ಪ್ರವಾಸಿ ತಾಣವನ್ನಾಗಿಸಲು ವಿಶ‍್ವ ಬ್ಯಾಂಕ್ ನೆರವಿನಿಂದ ₹ 8 ಕೋಟಿ ವೆಚ್ವದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲಾಗಿತ್ತು. ಇದಕ್ಕಾಗಿ ಕೆರೆ ನೀರನ್ನು ಖಾಲಿ ಮಾಡಲಾಗಿತ್ತು. ಕೆರೆ ತುಂಬಿರುವುದರಿಂದ ಶಾಸಕ ಮಸಲಾ ಜಯರಾಮ್ ಆ.20ರಂದು ಬಾಗಿನ ಅರ್ಪಿಸುವರು.

‘ಪ್ರವಾಸಿಗರಿಗೆ ತಾಲ್ಲೂಕು ಆಡಳಿತ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ’ ಎಂದು ಪ್ರವಾಸಿಗರ ದೂರುವರು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !