ಸಿನಿಮೀಯ ರೀತಿ ವಿದ್ಯಾರ್ಥಿಗಳ ಅಪಹರಣಕ್ಕೆ ಯತ್ನ

7

ಸಿನಿಮೀಯ ರೀತಿ ವಿದ್ಯಾರ್ಥಿಗಳ ಅಪಹರಣಕ್ಕೆ ಯತ್ನ

Published:
Updated:
Deccan Herald

ಕುಣಿಗಲ್: ತಾಲ್ಲೂಕಿನ ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ವರು ಮಕ್ಕಳನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಲು ಯತ್ನಿಸಲಾಗಿದೆ.

ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ರಾಮಚಂದ್ರ, 6ನೇ ತರಗತಿಯ ಅರ್ಪಿತಾ ಮತ್ತು ವೆಂಕಟೇಶ್ ಹಾಗೂ 7ನೇ ತರಗತಿಯ ಭೂಮಿಕಾ ಅವರನ್ನು ದುಷ್ಕರ್ಮಿಗಳು ಅಪಹರಣ ಮಾಡಲು ಯತ್ನಿಸಿದ್ದಾರೆ.

ಶಾಲಾ ವಿದ್ಯಾರ್ಥಿಗಳಿಗೆ ಚಾಕಲೇಟ್ ತೋರಿಸಿ ಪುಸಲಾಯಿಸಿದ್ದಾರೆ. ನಂತರ ಆಟೋದಲ್ಲಿ ಹತ್ತಿಸಿಕೊಳ್ಳಲು ದುಷ್ಕರ್ಮಿಗಳು ಯತ್ನಿಸಿದಾಗ ವಿದ್ಯಾರ್ಥಿಗಳು ಸ್ಕೂಲ್ ಬ್ಯಾಗ್ ಅಲ್ಲಿಯೇ ಬಿಸಾಕಿ ದಿಕ್ಕಾಪಾಲಾಗಿ ಶಾಲೆಯತ್ತ ಓಡಿ ಹೋಗಿ ಶಿಕ್ಷಕರಿಗೆ ತಿಳಿಸಿದ್ದಾರೆ.

ಈ ನಾಲ್ವರೂ ವಿದ್ಯಾರ್ಥಿಗಳು ಕೂತಾರಹಳ್ಳಿ ಮತ್ತು ಕುರುಪಾಳ್ಯ ಗ್ರಾಮದಿಂದ ಬೇಗೂರು ಶಾಲೆಗೆ ನಡೆದುಕೊಂಡು ಹೋಗಿ ಬರುತ್ತಾರೆ. ಶನಿವಾರ ಬೆಳಿಗ್ಗೆ ಶಾಲೆ ಮುಗಿದ ಬಳಿಕ ಊರಿಗೆ ಹಿಂದಿರುಗಿ ಬರುತ್ತಿದ್ದಾಗ ಅಪಹರಣ ಯತ್ನ ನಡೆದಿದೆ.

ವಿದ್ಯಾರ್ಥಿ ರಾಮಚಂದ್ರ ಪಿಎಸ್ಐ ಪುಟ್ಟೇಗೌಡ ಅವರಿಗೆ ಘಟನೆ ಬಗ್ಗೆ ವಿವರ ನೀಡಿದ್ದಾನೆ. ಪೋಷಕರಾದ ನಾಗೇಶ್ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !