ಬುಧವಾರ, ಸೆಪ್ಟೆಂಬರ್ 30, 2020
25 °C

ರೈತನ ಮೇಲೆ ದಾಳಿ; ಚಿರತೆ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ತೋಟಕ್ಕೆ ತೆರಳಿದ್ದ ರೈತನ ಕಿವಿ ಕಚ್ಚಿ ತುಂಡರಿಸಿ, ಗಾಯಗೊಳಿಸಿ ಪೊದೆ ಸೇರಿದ್ದ ಕರಡಿಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ.

ತಾಲ್ಲೂಕಿನ ನಿಟ್ಟೂರು ಹೋಬಳಿ ಮುದ್ದುಪುರ ಗ್ರಾಮದಲ್ಲಿ ಸತತ ನಾಲ್ಕು ಗಂಟೆಗಳ ಕಾರ್ಯಾಚರಣೆ ನಂತರ ಅರಿವಳಿಕೆ ನೀಡಿ ಸೆರೆ ಹಿಡಿಯಲಾಗಿದೆ.

ರೈತ ಮಹದೇವಯ್ಯ (53) ಮುಂಜಾನೆ ತಮ್ಮ ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ ಪೊದೆಯಲ್ಲಿ ಅಡಗಿದ್ದ ಕರಡಿ ದಿಢೀರ್ ದಾಳಿ ನಡೆಸಿ ಕಿವಿಯನ್ನು ಕಚ್ಚಿ ತುಂಡರಿಸಿ ಮೈಮೇಲೆರಗಿ ಪರಚಿ ಗಾಯಗೊಳಿಸಿತ್ತು. ಕಿರುಚಾಟ ಕೇಳಿ ಸ್ಥಳಕ್ಕೆ ಬಂದ ಜನರನ್ನು ಕಂಡು ಪೊದೆ ಸೇರಿತ್ತು.

ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಪೊದೆಯಲ್ಲಿ ಅವಿತ ಕರಡಿ ಹಿಡಿಯಲು ಹಾಸನದ ಅರವಳಿಕೆ ತಜ್ಞ ಡಾ.ಮರುಳೀಧರ್ ನೇತೃತ್ವದ ತಂಡ ಕರೆಸಿದರು. ನಂತರ ಸೆರೆ ಹಿಡಿಯಲಾಯಿತು.

5 ವರ್ಷದ ಗಂಡು ಕರಡಿಯನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು ಎಂದು ವಲಯ ಅರಣ್ಯಾಧಿಕಾರಿ ರವಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.