ಭಾನುವಾರ, ಜೂನ್ 20, 2021
21 °C

ಮಧುಗಿರಿ ಶೈಕ್ಷಣಿಕ ಜಿಲ್ಲೆ ರಾಜ್ಯಕ್ಕೆ ಮೂರನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ: ಮಧುಗಿರಿ ಶೈಕ್ಷಣಿಕ ಜಿಲ್ಲೆಯು ರಾಜ್ಯದಲ್ಲಿಯೇ ಮೂರನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದೆ. ಈ ಹಿಂದಿನ ಶೈಕ್ಷಣಿಕ ಸಾಧನೆಗಳನ್ನು ಉತ್ತಮಪಡಿಸಿಕೊಂಡಿದೆ. ಈ ಸಾಧನೆ ಮಾಡಿರುವುದು ಇಡೀ ಶಿಕ್ಷಣ ಇಲಾಖೆಯಲ್ಲಿಯೇ ಸಂಭ್ರಮಕ್ಕೆ ಕಾರಣವಾಗಿದೆ.

ಸಚಿವ ಸುರೇಶ್ ಕುಮಾರ್ ಮಧ್ಯಾಹ್ನ ಜಿಲ್ಲೆಯು ಮೂರನೇ ಸ್ಥಾನ ಪಡೆದಿರುವುದನ್ನು ಮಾಧ್ಯಮಗೋಷ್ಠಿಯಲ್ಲಿ ಪ್ರಕಟಿಸುತ್ತಿದ್ದಂತೆಯೇ ಡಿಡಿಪಿಐ ಕಚೇರಿ ಸೇರಿದಂತೆ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು.

ಶಿರಾ ತಾಲ್ಲೂಕಿನ ಗುಮ್ಮನಹಳ್ಳಿಯ ಆರ್.ರೆಹಾನ್ ಶಾಲೆಯ ವಿದ್ಯಾರ್ಥಿನಿ ಆರ್.ಪ್ರಿಯಾಂಕಾ 622 ಅಂಕ ಪಡೆಯುವ ಮೂಲಕ ಮಧುಗಿರಿ ಶೈಕ್ಷಣಿಕ ಜಿಲ್ಲೆಯಯೇ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶಿರಾ ತಾಲ್ಲೂಕಿನ ಭುವನಹಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಬಿ.ಪುಷ್ಪಲತಾ (621), ಮಧುಗಿರಿ ಪಟ್ಟಣದ ಕಾರ್ಡಿಯಲ್ ಶಾಲೆಯ ವಿದ್ಯಾರ್ಥಿ ಸಿ.ಪುರುಷೋತ್ತಮ್ (620), ಶಿರಾ ಮಂಜುನಾಥ ನಗರದ ಮಂಜುಶ್ರೀ ಆಂಗ್ಲ ಪ್ರೌಢಶಾಲೆಯ ಎಲ್.ಜಿ.ಕಾರ್ತಿಕ್ (620) ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಲಿನಲ್ಲಿ ಇದ್ದಾರೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ 192 ಶಾಲೆಗಳು ‘ಎ’, 55 ಶಾಲೆಗಳು ‘ಬಿ’ ಮತ್ತು 19 ಶಾಲೆಗಳು ‘ಸಿ’ ಗ್ರೇಡ್ ಫಲಿತಾಂಶಕ್ಕೆ ಭಾಜನವಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.