ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವಗಡ | ತಾಯಿ ಹತ್ಯೆ: ಮಗನಿಗೆ ಜೀವಾವಧಿ ಶಿಕ್ಷೆ

Published 2 ಜುಲೈ 2024, 14:36 IST
Last Updated 2 ಜುಲೈ 2024, 14:36 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ಕೆ.ಟಿ. ಹಳ್ಳಿಯಲ್ಲಿ ತಾಯಿಯನ್ನು ಹತ್ಯೆ ಮಾಡಿದ ಆರೋಪಿಗೆ ಮಧುಗಿರಿ ಸೆಷನ್ಸ್‌ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ಮತ್ತು ₹1 ಲಕ್ಷ ದಂಡ ವಿಧಿಸಿದೆ.

ಕೆ.ಟಿ. ಹಳ್ಳಿಯ ಮೃತೆ ಮಾರಕ್ಕ, ಆರೋಪಿ ರಾಕೇಶ (21) ನಡುವೆ ಹಣದ ವಿಚಾರಕ್ಕೆ 2021ರ ಸೆಪ್ಟೆಂಬರ್ 17ರಂದು ಜಗಳ ನಡೆದಿತ್ತು. ದುಡಿದ ಹಣವನ್ನು ಕೊಡದೆ ಖರ್ಚು ಮಾಡುತ್ತೀಯಾ ಎಂದು ತಾಯಿ ಬೈದದ್ದಕ್ಕೆ ಕೋಪಗೊಂಡ ರಾಕೇಶ ಕಟ್ಟಿಗೆಯಿಂದ ತಲೆಗೆ ಹೊಡೆದು, ತಲೆಯನ್ನು ಗೋಡೆಗೆ ಕುಟ್ಟಿ ಮನೆಯಲ್ಲಿಯೇ ಹತ್ಯೆ ಮಾಡಿದ್ದನು.

ಪೊಲೀಸ್ ಇನ್‌ಸ್ಪೆಕ್ಟರ್‌ ಕಾಂತರೆಡ್ಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪ್ರಾಸಿಕ್ಯೂಟರ್ ಬಿ.ಎಂ. ನಿರಂಜನಮೂರ್ತಿ ವಾದ ಮಂಡಿಸಿದ್ದರು. ನ್ಯಾಯಾಧೀಶ ಯಾಧವ ಕರಕೇರ ತೀರ್ಪು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT