ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಲಮಡಿಕೆ ಚೆಕ್‌ಡ್ಯಾಂ ತಲುಪಿದ ಕೃಷ್ಣ ನದಿ ನೀರು

Last Updated 24 ಮೇ 2020, 17:06 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಬಳಿ ಉತ್ತರ ಪಿನಾಕಿನಿ ನದಿಗೆ ನಿರ್ಮಿಸಿರುವ ಚೆಕ್ ಡ್ಯಾಂಗೆ ಭಾನುವಾರ ಆಂಧ್ರದಿಂದ ಕೃಷ್ಣ ನದಿ ನೀರು ಹರಿಯಿತು.

ಆಂಧ್ರ ಪ್ರದೇಶದ ಆಂಧ್ರನಿವಾ ಯೋಜನೆಯಡಿ ಆಂಧ್ರದ ಪೇರೂರು ಡ್ಯಾಂಗೆ ನೀರು ಹರಿಸಲು ಅಲ್ಲಿನ ಸರ್ಕಾರ ಹಲವು ವರ್ಷಗಳಿಂದ ಪ್ರಯತ್ನ ನಡೆಸಿತ್ತು. ವಾರದ ಹಿಂದೆ ಅನಂತಪುರ ಜಿಲ್ಲೆ ರೊದ್ದಂ ಬಳಿಯ ಪೆದ್ದಕೋಡಪಲ್ಲಿಯಿಂದ ಉತ್ತರ ಪಿನಾಕಿನಿ ನದಿ ಪಾತ್ರದಲ್ಲಿ ನಿರ್ಮಿಸಲಾದ ಕಾಲುವೆಗೆ ನೀರು ಹರಿಸಲಾಗಿತ್ತು.

ಇಂದು ತಾಲ್ಲೂಕಿನ ಗಡಿ ಗ್ರಾಮ ಪೆಂಡ್ಲಿಜೀವಿ ಮೂಲಕ ನಾಗಲಮಡಿಕೆಗೆ ನೀರು ತಲುಪಿತು. ಮೇ 27ರಂದು ನಾಗಲಮಡಿಕೆ ಚೆಕ್‌ ಡ್ಯಾಂ ತುಂಬಿ ಪೇರೂರು ಡ್ಯಾಂನತ್ತ ನೀರು ಹರಿಯಬಹುದು ಎಂದು ಆಂಧ್ರ ಪ್ರದೇಶ ಸರ್ಕಾರಕ್ಕೆ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದ ಗಡಿಗೆ ನೀರು ಪ್ರವೇಶಿಸಿದ ಕೂಡಲೇ ತಾಲ್ಲೂಕಿನ ಜನರು ಕಾಲುವೆಯೊಳಗೆ ಇಳಿದು ಸಂತಸ ವ್ಯಕ್ತಪಡಿಸಿದರು. ಕೃಷ್ಣ ನದಿ ನೀರನ್ನು ಮೈ ಮೇಲೆ ಎರಚಿಕೊಂಡು ನಮಸ್ಕರಿಸಿದರು. ಕೆಲವರು ಮೀನು ಹಿಡಿದು ಖುಷಿಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT