ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಜೀವ ಸಂಕುಲಕ್ಕೆ ಕಂಟಕ

Published 6 ಜೂನ್ 2024, 5:24 IST
Last Updated 6 ಜೂನ್ 2024, 5:24 IST
ಅಕ್ಷರ ಗಾತ್ರ

ತುಮಕೂರು: ಪರಿಸರದಲ್ಲಿ ಆಗುತ್ತಿರುವ ವೈಪರೀತ್ಯದಿಂದಾಗಿ ಜೀವ ಸಂಕುಲದ ಉಳಿವು ಕಷ್ಟಕರವಾಗುತ್ತಿದ್ದು, ಈಗಿನಿಂದಲೇ ಎಚ್ಚೆತ್ತು ಪರಿಸರ ಸಂರಕ್ಷಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ಮಾಡಿದರು.

ನಗರದಲ್ಲಿ ಬುಧವಾರ ಕುವೆಂಪು ನಗರ ಮತ್ತು ವಿದ್ಯಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರ ನಾಶದಿಂದ ಜನ, ಪ್ರಾಣಿ ಸಂಕುಲದ ಉಳಿವಿನ ಮೇಲೆ ಪರಿಣಾಮ ಬೀರಲಿದೆ. 100 ಮರ ಕಡಿದರೆ ಒಂದು ಸಾವಿರ ಮರಗಳನ್ನು ಬೆಳೆಸುವ ಮನೋಧರ್ಮ ಬೆಳೆಸಿಕೊಳ್ಳಬೇಕು ಎಂದರು.

ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ‘ಮಗು ಹುಟ್ಟಿದ ಕೂಡಲೆ ಆ ಮಗುವಿನ ಹೆಸರಲ್ಲಿ ಒಂದು ಸಸಿ ನೆಡುವ ಸಂಪ್ರದಾಯ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಎಚ್‌ಡಿಎಫ್‌ಸಿ ಬ್ಯಾಂಕ್‍ ಕ್ಲಸ್ಟರ್ ಅಧಿಕಾರಿ ವಿಶ್ವನಾಥ್, ‘ಪರಿಸರ ಕಾಳಜಿಯ ಕಾರ್ಯಕ್ರಮಕ್ಕೆ ಬ್ಯಾಂಕ್ ಸಹಕಾರ ನೀಡಲಿದೆ’ ಎಂದರು.

ಕುವೆಂಪು ನಗರ ಸಂಘದ ಗೌರವ ಅಧ್ಯಕ್ಷ ಬಸವನಗೌಡ, ಕಾರ್ಯಾಧ್ಯಕ್ಷ ಜಿ.ವಿ.ಶ್ರೀನಿವಾಸುಲು, ವಿದ್ಯಾನಗರ ಸಂಘದ ಗೌರವ ಅಧ್ಯಕ್ಷ ಟಿ.ಆರ್.ಆಂಜನಪ್ಪ, ಮುಖಂಡರಾದ ಶ್ರೀನಿವಾಸ್, ಚಂದ್ರಶೇಖರರಾವ್, ಕುಮಾರಸ್ವಾಮಿ, ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಎಸ್.ರಾಮಲಿಂಗರೆಡ್ಡಿ ಇತರರು ಭಾಗವಹಿಸಿದ್ದರು.

ಪ್ರಮುಖ ರಸ್ತೆಗಳಲ್ಲಿ ವಿವೇಕಾನಂದ ಶಾಲೆಯ ಮಕ್ಕಳು ಪರಿಸರ ಜಾಗೃತಿ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT