ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲ್‌ ಹತ್ಯಾಕಾಂಡ: ಆರೋಪಿಗಳಿಗೆ ನ್ಯಾಯಾಂಗ ಬಂಧನ

ನಕ್ಸಲ್‌ ಹತ್ಯಾಕಾಂಡ: ಆರೋಪಿಗಳಿಗೆ ನ್ಯಾಯಾಂಗ ಬಂಧನ
Published 8 ಜನವರಿ 2024, 20:56 IST
Last Updated 8 ಜನವರಿ 2024, 20:56 IST
ಅಕ್ಷರ ಗಾತ್ರ

ಪಾವಗಡ: ವೆಂಕಟಮ್ಮನಹಳ್ಳಿಯ ಪೊಲೀಸರ ಹತ್ಯಾಕಾಂಡ ಪ್ರಕರಣದಲ್ಲಿ ಬಂಧಿಸಲಾದ ಐವರು ಆರೋಪಿಗಳನ್ನು ಸೋಮವಾರ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಂತರ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಆಂಧ್ರಪ್ರದೇಶದ ನಾಗರಾಜು, ಧರ್ಮಾವರಂ ಪದ್ಮ, ರಾಮಗಿರಿ ತಲ್ಲಿಮಡುಗು ಗ್ರಾಮದ ಬೋಯ ಓಬಳೇಶ್, ರಾಮಮೋಹನ್, ಬೋಯ ಆಂಜನೇಯುಲು ಅವರನ್ನು ಪೊಲೀಸರು ಭಾನುವಾರ ಆಂಧ್ರ ಪ್ರದೇಶದಲ್ಲಿ ಬಂಧಿಸಿ ಪಟ್ಟಣದ ಪೊಲೀಸ್ ಠಾಣೆಗೆ ಕರೆ ತಂದು ಪ್ರಶ್ನಿಸಿದ್ದರು. ಮಧ್ಯಾಹ್ನದ ವೇಳೆಗೆ ಆರೋಪಿಗಳನ್ನು ಬಿಗಿ ಭದ್ರತೆಯಲ್ಲಿ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಕರೆ ತರಲಾಯಿತು. ಆರೋಪಿ ಮಹಿಳೆಯನ್ನು ಬೆಂಗಳೂರು ಜೈಲಿಗೂ ಮತ್ತು ಇತರ ಆರೋಪಿಗಳನ್ನು ಮಧುಗಿರಿ ಜೈಲಿಗೆ ಕರೆದೊಯ್ಯಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT