ಭಾನುವಾರ, ಸೆಪ್ಟೆಂಬರ್ 19, 2021
30 °C
20 ಜನರಿಗೆ ಮಾತ್ರ ಅವಕಾಶ: ಹಿಂದೂ‌ಸಭಾದ ಕಾರ್ಯಕರ್ತರ ವಿರೋಧ

ಕೋವಿಡ ಮಾರ್ಗಸೂಚಿಗೆ ಆಕ್ಷೇಪ: ಗಣಪತಿ ವಿಸರ್ಜನೆ ಮುಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಾ: ಪಟ್ಟಣದ ಹಿಂದೂ ಮಹಾ ಗಣಪತಿ ವಿಸರ್ಜನೆಗೆ ಕೊರೊನಾ ಮಾರ್ಗಸೂಚಿ ಅಡ್ಡಿಯಾಗಿದೆ ಎಂದು ಆರೋಪಿಸಿದ ಹಿಂದೂ‌ಸಭಾದ ಕಾರ್ಯ
ಕರ್ತರು ಗಣೇಶ ವಿಸರ್ಜನೆಯನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.

ನಗರದ ಗವಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹಿಂದೂ ಮಹಾಗಣಪತಿ ಮೂರ್ತಿಯನ್ನು ಪ್ರತಿ
ಷ್ಠಾಪಿಸಲಾಗಿದೆ. ಮೂರನೇ ದಿನವಾದ ಭಾನುವಾರ ವಿಸರ್ಜನೆ ಹಮ್ಮಿಕೊಳ್ಳಲಾಗಿತ್ತು. ಆದರೆ ವಿಸರ್ಜನೆ ಸಮಯದಲ್ಲಿ ಕೇವಲ 20 ಮಂದಿಗೆ ಮಾತ್ರ ಅವಕಾಶ ನೀಡಲಾಗುವುದು ಎನ್ನುವ ಕೊರೊನಾ ನಿಯಮಾವಳಿಯಿಂದ ಗೊಂದಲದ ವಾತಾವರಣ ನಿರ್ಮಾಣವಾಗಿ ಕೊನೆಗೆ ಗಣೇಶನ ವಿಸರ್ಜನೆಯನ್ನು ಮುಂದಕ್ಕೆ ಹಾಕಿದರು.

ಗಣೇಶ ವಿಸರ್ಜನೆಯ ಸಮಯದಲ್ಲಿ ಮೆರವಣಿಗೆಗೆ ಅವಕಾಶವಿಲ್ಲ. ಗವಿ ಆಂಜನೇಯ ಸ್ವಾಮಿ ದೇವಸ್ಥಾನ
ದಿಂದ ಟ್ರ್ಯಾಕ್ಟರ್‌ನಲ್ಲಿ ಗಣೇಶನನ್ನು ಕುಳ್ಳರಿಸಿಕೊಂಡು ವಿದ್ಯಾಗಣಪತಿ ದೇವಸ್ಥಾನಕ್ಕೆ‌ ತೆರಳಿ ಅಲ್ಲಿ‌ ಪೂಜೆ ಸಲ್ಲಿಸಿ ಜಾಜಿಕಟ್ಟೆಯಲ್ಲಿ ಗಣಪತಿಯನ್ನು ವಿಸರ್ಜಿಸಲು ಅವಕಾಶ ನೀಡಲಾಗುವುದು. 20 ಜನರನ್ನು ಆಯ್ಕೆ ಮಾಡಿಕೊಂಡು ಗಣೇಶ ವಿಸರ್ಜನೆ ಮಾಡುವಂತೆ ಪೊಲೀಸರು ಷರತ್ತು ವಿಧಿಸಿದಾಗ ಅದನ್ನು ಹಿಂದೂ
‌ಸಭಾದ ಕಾರ್ಯಕರ್ತರು ವಿರೋಧಿಸಿದರು‌

ಕಾರ್ಯಕರ್ತರೇ 500 ಮಂದಿ ಇದ್ದೇವೆ. ಇನ್ನು ಭಕ್ತರನ್ನು ಬರಬೇಡಿ ಎಂದು ಹೇಳಲು‌ ಸಾಧ್ಯವಿಲ್ಲ. ರಾಜ
ಕೀಯ ಕಾರ್ಯಕ್ರಮಗಳು, ಮದುವೆ ಸಮಾರಂಭ, ಕೇಂದ್ರ ಹಾಗೂ ರಾಜ್ಯ ಸಚಿವರು ಬಂದ ಸಮಯದಲ್ಲಿ ಮೆರ
ವಣಿಗೆ ನಡೆಸಲು ಸಹಸ್ರಾರು ಜನ ಸೇರಲು‌ ಕೋವಿಡ್ ನಿಯಮಾವಳಿ ಅಡ್ಡಿಯಾಗು
ವುದಿಲ್ಲ. ಶಾಲೆ, ಕಾಲೇಜುಗಳಿಗೆ ಸರ್ಕಾರವೇ ಅವಕಾಶ ನೀಡಿದೆ. ಗಣೇಶ
ವಿಸರ್ಜನೆಗೆ ಮಾತ್ರ ಕೊರೊನಾ ನಿಯಮಾ
ವಳಿ ಅಡ್ಡಿ ಬರುತ್ತವೆಯೇ? ವಿಸರ್ಜನೆಗೆ ಅವಕಾಶ ನೀಡಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದರು.

ಸರ್ಕಾರದ ನಿಯಮಾವಳಿಗಳಂತೆ ಗಣೇಶ ವಿಸರ್ಜನೆ ಮಾಡುವಂತೆ ಪೊಲೀಸರು ಮನವೊಲಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊರೊನಾ ನಿಯಮಾವಳಿ ಸಡಿಲಿಸಿದ ನಂತರ ಗಣೇಶ ಮೂರ್ತಿ ವಿಸರ್ಜಿಸುವುದಾಗಿ ಪಟ್ಟು ಹಿಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪೂರವಾಡ್, ಅಡಿಷನಲ್ ಎಸ್.ಪಿ ಟಿ.ಜೆ.ಉದೇಶ್ ಅವರು ಮುಖಂಡರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಯತ್ನಿಸದರೂ ಪ್ರಯೋಜನವಾಗಲಿಲ್ಲ.

ವಿಧಾನ ಪರಿಷತ್‌ ಸದಸ್ಯ ಚಿದಾ
ನಂದ ಗೌಡ, ನಾರು ಅಭಿವೃದ್ಧಿ ಮಂಡಳಿ
ಅಧ್ಯಕ್ಷ ಬಿ.ಕೆ.ಮಂಜುನಾಥ್, ರೇಷ್ಮೆ ಉದ್ಯ
ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ, ಪಿ.ಆರ್.ಮಂಜುನಾಥ್, ಬರಗೂರು ನಟರಾಜು, ಜೆಡಿಎಸ್ ಮುಖಂಡರಾದ ಆರ್.ರಾಮು, ಅಂಜಿ
ನಪ್ಪ, ಹಿಂದೂ ಸಭಾದ ಮಂಜುನಾಥ್, ಸಂಜು, ವಿಜಯರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.