ಕುಡಿಯುವ ನೀರು ಶೌಚಾಲಯ ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಿ ಮೂಲಸೌಕರ್ಯ ಕಲ್ಪಿಸಬೇಕು. ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಬೇಕು. ವೇಣುಗೋಪಾಲಾಚಾರಿ ಪಾವಗಡ
– ವೇಣುಗೋಪಾಲಾಚಾರಿ, ಪಾವಗಡ
ಪಾವಗಡ ಬೆಟ್ಟದ ಮೇಲೆ ಪ್ಲಾಸ್ಟಿಕ ನಿಷೇಧಿಸಿ ಸ್ವಚ್ಛತೆಗೆ ಸಿಬ್ಬಂದಿ ನಿಯೋಜಿಸಬೇಕು. ಬೆಟ್ಟ ಇತಿಹಾಸ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಭಿತ್ತಿ ಪತ್ರಗಳನ್ನು ಹಾಕಬೇಕು.
– ಪಿ.ಎಸ್. ಸಂದೀಪ್
ಶತಮಾನಗಳ ಇತಿಹಾಸವಿರುವ ಪಾವಗಡ ಬೆಟ್ಟದ ಬಳಿ ಐತಿಹಾಸಿಕ ಪಳಯುಳಿಕೆಗಳ ವಸ್ತು ಸಂಗ್ರಹಾಲಯ ಆರಂಭಿಸಿ ಇತಿಹಾಸದ ಬಗ್ಗೆ ಅರಿವು ಮೂಡಿಸಬೇಕು. ಸ್ಥಳೀಯ ಇತಿಹಾಸದ ಬಗ್ಗೆ ಮಾಹಿತಿ ನೀಡಬೇಕು
– ಭಾನುತೇಜು ವೈದ್ಯ
ನಿಧಿ ಕಳ್ಳರು ಬೆಟ್ಟದ ಮೇಲೆ ಸ್ಮಾರಕಗಳನ್ನು ಹಾಳುಮಾಡುತ್ತಿದ್ದು ಭದ್ರತೆ ಕಲ್ಪಿಸಬೇಕು. ಆರಂಭದಲ್ಲಿ ಬೆಟ್ಟ ಹತ್ತುವವರನ್ನು ಪರಿಶೀಲಿಸಿ ಪ್ಲಾಸ್ಟಿಕ್ ಇತರೆ ಅಪಾಯಕಾರಿ ಸಾಮಗ್ರಿ ಕೊಂಡೊಯ್ಯದಂತೆ ಎಚ್ಚರ ವಹಿಸಬೇಕು