ಗುರುವಾರ , ಫೆಬ್ರವರಿ 20, 2020
31 °C
ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

ತುಮಕೂರು | ಸಿದ್ಧಗಂಗಾ ಮಠದಲ್ಲಿ ಜನಸಾಗರ, ಜಾನಪದ ಕಲೆಗಳ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ತುಮಕೂರು: ಸಿದ್ಧಗಂಗಾ ಮಠದಲ್ಲಿ ನಡೆಯುತ್ತಿರುವ ಶಿವಕುಮಾರ ಸ್ವಾಮೀಜಿ ಮೊದಲ ವರ್ಷದ ಪುಣ್ಯ ಸ್ಮರಣೆಯಲ್ಲಿ ಪಾಲ್ಗೊಳ್ಳಲು ನಾಡಿನ ನಾನಾ ಭಾಗಗಳಿಂದ ಭಕ್ತರು ಮಠದತ್ತ ಧಾವಿಸುತ್ತಿದ್ದಾರೆ‌.

ಸುತ್ತೂರು ಶ್ರೀ, ಸಚಿವ ಸಿ.ಟಿ.ರವಿ, ಸೋಮಣ್ಣ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಸೇರಿದಂತೆ ನಾನಾ ಮಠಾಧೀಶರು ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು.

ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿರುವ ಮಠದ ವಿದ್ಯಾರ್ಥಿಗಳು

ಉತ್ತರ ಕರ್ನಾಟಕ ಸೇರಿದಂತೆ ದೂರದ ಜಿಲ್ಲೆಗಳ ಭಕ್ತರು ಶನಿವಾರವೇ ಮಠಕ್ಕೆ ಬಂದಿದ್ದಾರೆ. ಅಪಾರ ಸಂಖ್ಯೆಯ ಭಕ್ತರಿಂದ ಗಿಜಿಗುಡುತ್ತಿರುವ ಮಠದ ಪ್ರಾಂಗಣದಲ್ಲಿ ಭಾನುವಾರ ಬೆಳಿಗ್ಗೆ ಸ್ವಾಮೀಜಿ ಭಾವಚಿತ್ರದ ಮೆರವಣಿಗೆ ನಡೆಯಿತು. 

ಪ್ರಮುಖ ಶ್ರದ್ಧಾ ಕೇಂದ್ರವಾದ ಶಿವಕುಮಾರ ಶ್ರೀಗಳ ಗದ್ದುಗೆಯ ಹೊರ ಮತ್ತು ಒಳಭಾಗವನ್ನು ಹೂಗಳಿಂದ ಅಲಂಕರಿಸಲಾಗಿದೆ. ಬೆಳಿಗ್ಗೆಯಿಂದ ಗದ್ದುಗೆ ದರ್ಶನಕ್ಕೆ ಭಕ್ತರು ಸಾಲಿಕ್ಕುತ್ತಿದ್ದಾರೆ. ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಸ್ವಾಮೀಜಿ ಸ್ಮರಣೆ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಹಾಗೂ ನಾಯಕರು.

ಮಠದಲ್ಲಿ ವೀರಗಾಸೆ, ನಂದಿಧ್ವಜ ಕುಣಿತ ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳು ಮೇಳೈಸಿವೆ. ಮಕ್ಕಳು ವಾದ್ಯಗಳ ಸದ್ದಿಗೆ ನಿಂತಲ್ಲೇ ಕುಣಿಯುತ್ತಿದ್ದಾರೆ. 

ಶಿರಾದ ಹಜ್ರತ್ ಸೈಯದ್ ಮೊಹಮದ್ ಷಾ ಖಾದ್ರಿ ಶಿಕ್ಷಣ ಸಂಸ್ಥೆ ಭಕ್ತಿಗೆ ಮಜ್ಜಿಗೆ ಮತ್ತು ನೀರು ವಿತರಣೆ ವ್ಯವಸ್ಥೆ ಮಾಡಿದೆ. ಮಠದ ಪ್ರವೇಶದ್ವಾರದಲ್ಲಿಯೇ ಈ ವ್ಯವಸ್ಥೆ ಇದೆ. ದಣಿವಾರಿಸಿಕೊಳ್ಳಲು ಮಕ್ಕಳು, ಭಕ್ತರು ಇಲ್ಲಿಗೆ ಬರುತ್ತಿದ್ದಾರೆ.

ಸೆಲ್ಫಿ ಸಂಭ್ರಮ

ಶಿವಕುಮಾರ ಸ್ವಾಮೀಜಿ ಅವರ ಭಾವಚಿತ್ರದ ಮೆರವಣಿಗೆ ಮಠದ ಅಂಗಳದಲ್ಲಿ ಪೂರ್ಣವಾಗಿದೆ. ಆ ಉತ್ಸವದ ಸಾರೋಟನ್ನು ಸಂಸ್ಕೃತ ವೇದ ಪಾಠ ಶಾಲೆ ಮುಂಭಾಗ ನಿಲ್ಲಿಸಿದ್ದು ಅಲ್ಲಿ ಜನರು ತಾ ಮುಂದು ನಾ ಮುಂದು ಎಂದು ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ. 

ವೇದಿಕೆಯ ಮುಂಭಾಗ ವಚನ ಗಾಯನ ಆಯೋಜಿಸಲಾಗಿದೆ. ವಿವಿಧ ಮಠಾಧೀಶರು ಬರುತ್ತಿದ್ದಾರೆ. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರರು, ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಮಠದ ಪ್ರವೇಶ ದ್ವಾರದಲ್ಲಿ ನೀರು, ಮಜ್ಜಿಗೆ ಸೇವೆ

 

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಂಭ್ರಮದಲ್ಲಿ ಭಕ್ತರು

 

ತುಮಕೂರು ಸಿದ್ಧಗಂಗಾ ಮಠದಲ್ಲಿರುವ ಉತ್ಸವದ ಸಾರೋಟು ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದೆ.

 

ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಜನಸಮೂಹ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು