ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾವಗಡ | 800 ಗ್ರಾಂ ಗಾಂಜಾ ವಶ: ಆರೋಪಿಗಳ ಬಂಧನ

Published 10 ಜುಲೈ 2024, 14:22 IST
Last Updated 10 ಜುಲೈ 2024, 14:22 IST
ಅಕ್ಷರ ಗಾತ್ರ

ಪಾವಗಡ: ಪಟ್ಟಣದ ಹುಲಿಬೆಟ್ಟ ತಾಂಡ ಮಾರ್ಗದ ಬಳಿ ಗಾಂಜಾ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪಟ್ಟಣ ಠಾಣೆ ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.

ಆಂಧ್ರದ ಚೆರ್ಲಪಲ್ಲಿ ಗ್ರಾಮದ ಗೌಸಿಮುದ್ದೀನ್(28), ಪಿ. ರೊಪ್ಪ ಗ್ರಾಮದ ಕುಮಾರ್ ಬಂಧಿತರು.

ಪಟ್ಟಣದ ಹೊರವಲಯದ ಹುಲಿಬೆಟ್ಟ ತಾಂಡದ ಬಳಿಯ ರಸ್ತೆಯಲ್ಲಿ ಆಟೊದಲ್ಲಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಟ್ಟಣದ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಆಟೊದಲ್ಲಿದ್ದ 800 ಗ್ರಾಂ ಗಾಂಜಾ, ಆಟೊವನ್ನು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT