ತುಮಕೂರು: ರಾಜ್ಯ ಒಲಿಂಪಿಕ್ಸ್ ಕೂಟದ ಮೊದಲ ದಿನವೇ ಕಬಡ್ಡಿ, ಆರ್ಚರಿ, ಬ್ಯಾಡ್ಮಿಂಟನ್, ಫೆನ್ಸಿಂಗ್ (ಕತ್ತಿವರಸೆ), ಫುಟ್ಬಾಲ್, ನೆಟ್ಬಾಲ್, ಟೆಕ್ವಾಂಡೊ ಸ್ಪರ್ಧೆಗಳು ನಡೆದವು.

ಟೆಕ್ವಾಂಡೊ ಸ್ಪರ್ಧೆಯ ಪುರುಷರ 87 ಕೆ.ಜಿ ವಿಭಾಗದಲ್ಲಿ ನೇಸರ ಡಿ.ಗೌಡ ಚಿನ್ನದ ಪದಕ ಪಡೆದರು. ವೈ.ಲಿಖಿತ್, ಜಿ.ಎಂ.ಸಾಗರ್ ಕ್ರಮವಾಗಿ ಬೆಳ್ಳಿ, ಕಂಚು ಗೆದ್ದರು.

45 ಕೆ.ಜಿ ವಿಭಾಗ: ಪ್ರತ್ಯುಶ್ ಮಾಣಿ–1, ಎಚ್.ಅಬುಬಕ್ಕರ್–2, ಎಂ.ಆರ್.ಮನೋಜ್ ನಾಯಕ್–3. 54 ಕೆ.ಜಿ ವಿಭಾಗ: ಜಿ.ಅಕ್ಷಯ್ಕುಮಾರ್–1, ಎಸ್.ಸೂರ್ಯ–2, ವಿಜಯ್ ಧಾಮಿ–3. 63 ಕೆ.ಜಿ ವಿಭಾಗ: ಎಸ್.ರಾಹುಲ್–1, ಉಮೇಶ್ ಚೌಧರಿ–2, ಮೊಹಮ್ಮದ್ ಜಿ.ಹೌಸ್–3. 74 ಕೆ.ಜಿ ವಿಭಾಗ: ಜೆ.ಶ್ರೇಯಸ್–1 ಎಂ.ಗೌತಮ್–2, ಮೊಹಮ್ಮದ್ ಜಹೀದ್–3.

ಮಹಿಳೆಯರ 46 ಕೆ.ಜಿ ವಿಭಾಗ: ಸಂಜನಾ ಶರ್ಮ–1, ವಿಹಾರಿಕಾ–2, ನಯನಾ ವಿಷ್ಣು–3. 53 ಕೆ.ಜಿ.ವಿಭಾಗ: ಎಂ.ಪೂರ್ವಿಕಾ–1, ಸಿ.ಸಾನ್ವಿಶ್ರೀ–2, ಅಂಕಿತಾ–3. 62 ಕೆ.ಜಿ ವಿಭಾಗ: ವಿ.ಹ್ಯಾಪಿ–1, ಎಸ್.ಅನುಶಾವಾಣಿ–2, ಪ್ರೀಯಾಂಕಾ–3ನೇ ಸ್ಥಾನ ಪಡೆದರು.

ರಾಜಾ ಮೊಹ್ಮದ್ ಮಿಂಚು: ಫುಟ್ಬಾಲ್ ಉದ್ಘಾಟನಾ ಪಂದ್ಯದಲ್ಲಿ ಹಾಸನ ಮತ್ತು ಉತ್ತರ ಕನ್ನಡ ತಂಡಗಳು ಮುಖಾಮುಖಿಯಾದವು. 4-1 ಗೋಲುಗಳ ಅಂತರದಲ್ಲಿ ಉತ್ತರ ಕನ್ನಡ ತಂಡ ಗೆಲುವು ದಾಖಲಿಸಿತು. ತಂಡದ ರಾಜಾ ಮೊಹ್ಮದ್ ಮಿಂಚಿದರು. ಮೂರು ಗೋಲ್ (10, 45 ಮತ್ತು 55 ನಿಮಿಷ) ಗಳಿಸಿ ಪ್ರೇಕ್ಷಕರನ್ನು ರಂಜಿಸಿದರು. ಇಹಾಬ್ (58 ನಿ.) ಒಂದು ಗೋಲ್ ಬಾರಿಸಿದರು. ಹಾಸನದ ಪರ ಶಶಿ ಕುಮಾರ್ ಏಕೈಕ ಗೋಲ್ ಗಳಿಸಿದರು.

ಎರಡನೇ ಪಂದ್ಯದಲ್ಲಿ ಕೊಡಗು ಮತ್ತು ಮಂಡ್ಯ ತಂಡಗಳು ಎದುರಾದವು. 2-0 ಗೋಲುಗಳಿಂದ ಕೊಡಗು ತಂಡ ಜಯ ಸಾಧಿಸಿತು. ಅಣ್ಣಪ್ಪ ಮತ್ತು ಮೊಹ್ಮದ್ ಸಲಾಹುದ್ದೀನ್ ತಲಾ ಒಂದು ಗೋಲ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.