ಮಧುಗಿರಿ: ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಬೇಕು ಎಂದು ತಗ್ಗೀಹಳ್ಳಿ ರಾಮಕೃಷ್ಣ ಮಠದ ರಮಾನಂದ ಚೈತನ್ಯ ಸ್ವಾಮೀಜಿ ತಿಳಿಸಿದರು.

ಪುರವರ ಹೋಬಳಿ ತಗ್ಗೀಹಳ್ಳಿ ರಾಮಕೃಷ್ಣ ಮಠದಲ್ಲಿ ಇತ್ತೀಚಿಗೆ ನಡೆದ ಹೊಲಿಗೆ ಹಾಗೂ ಎಂಬ್ರಾಯ್ಡರಿ ತರಬೇತಿ ಕೇಂದ್ರ ಉದ್ಘಾಟನೆ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

‘ಬದುಕಿರುವವರೆಗೂ ಕಲಿಯಬೇಕು’ ಎಂಬ ರಾಮಕೃಷ್ಣರ ವಾಣಿಯಂತೆ, ಕಲಿಯಲು ಯಾವುದೇ ವಯಸ್ಸು, ಲಿಂಗಬೇಧವಿಲ್ಲ. ಕಲಿತರೆ ಬದುಕಬಹುದು. ಹೊಲಿಗೆ ಹಾಗೂ ಎಂಬ್ರಾಯ್ಡರಿ ತರಬೇತಿ ಪಡೆದು ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಬಹುದು. ಟೈಲರಿಂಗ್ ಕಲಿತವರಿಗೆ ಗಾರ್ಮೆಂಟ್ಸ್ಗಳಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಎಲ್ಲರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಮುರಳಿಧರ್ ಹಾಲಪ್ಪ ಮಾತನಾಡಿ, ಸೇವೆಗೆ, ನಮ್ಮ ಭಾಗದಿಂದ ಸಾವಿರಾರು ಹೆಣ್ಣುಮಕ್ಕಳು ಗಾರ್ಮೆಂಟ್ಸ್ಗಳಿಗೆ ತುಮಕೂರು, ದೊಡ್ಡಬಳ್ಳಾಪುರ, ಬೆಂಗಳೂರು ಕಡೆ ದಿನನಿತ್ಯ ಹೋಗುತ್ತಿದ್ದಾರೆ. ಟೈಲರಿಂಗ್ ತರಬೇತಿ ಕೇಂದ್ರ ಆರಂಭ ಮಾಡಿರುವುದು ಹೆಚ್ಚಿನ ಹೆಣ್ಣುಮಕ್ಕಳಿಗೆ ಅನುಕೂಲವಾಗುತ್ತದೆ. ಹಲಸೂರು ಮಠದಿಂದ ಸರ್ಕಾರಿ ಶಾಲೆಯ 150 ಬಡ ಮಕ್ಕಳಿಗೆ ಸೈಕಲ್ ವಿತರಿಸುತ್ತಿರುವುದು ಶ್ಲಾಘನೀಯ ಎಂದರು.

ಸ್ವಾಮಿ ಭೋಧಸ್ವರೂಪಾನಂದಜೀ, ಸ್ವಾಮಿ ಮುಕ್ತಿಪದಾನಂದಜೀ, ಸ್ವಾಮಿ ಯೋಗತತ್ವಾನಂದಜೀ, ಸ್ವಾಮಿ ಶಿವಕೃಪಾನಂದಜೀ, ಉಪೇಂದ್ರಯ್ಯ, ತೇಜಸ್ವಿನಿ, ನಾರಾಯಣ ತಾರಾಮಣಿ, ದಾಕ್ಷಾಯಣಿ, ಮಾಧುರಿ, ಶಶಿಕಲಾ, ಸುರೇಶ ಗಂಡೇಟಿ, ವಾಸುದೇವ ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.