ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೆ: ಕ್ವಿಂಟಲ್‌ಗೆ ₹26 ಸಾವಿರ!

Published 5 ಫೆಬ್ರುವರಿ 2024, 16:33 IST
Last Updated 5 ಫೆಬ್ರುವರಿ 2024, 16:33 IST
ಅಕ್ಷರ ಗಾತ್ರ

ತುಮಕೂರು: ಗುಣಮಟ್ಟದ ಹುಣಸೆ ಹಣ್ಣಿಗೆ ಉತ್ತಮ ಬೆಲೆ ಸಿಗುತ್ತಿದ್ದು ಸೋಮವಾರ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಹುಣಸೆ ಹಣ್ಣು ₹26 ಸಾವಿರಕ್ಕೆ ಮಾರಾಟವಾಗಿದೆ.

ಕೊರಟಗೆರೆ ತಾಲ್ಲೂಕು ನೇಗಲಾಳ ಗ್ರಾಮದ ಜಯಣ್ಣ ಅವರು ಮಾರುಕಟ್ಟೆಗೆ ತಂದಿದ್ದ 70 ಕೆ.ಜಿ ಹುಣಸೆ ಹಣ್ಣು ಕ್ವಿಂಟಲ್‌ಗೆ ₹26 ಸಾವಿರ ದರದಲ್ಲಿ ಮಾರಾಟವಾಗಿದೆ. ಈ ಬಾರಿ ಇದುವರೆಗೆ ಹುಣಸೆಗೆ ಸಿಕ್ಕ ಹೆಚ್ಚು ಬೆಲೆ ಇದಾಗಿದೆ.  

ಈ ಬಾರಿ ಗುಣಮಟ್ಟದ ಹಣ್ಣಿಗೆ ಒಳ್ಳೆಯ ಬೆಲೆ ಬಂದಿದೆ. ವ್ಯಾಪಾರಿಗಳು ಗುಣಮಟ್ಟದ ಹಣ್ಣು ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಗುಣಮಟ್ಟವಿದ್ದರೆ ಉತ್ತಮ ಬೆಲೆ ಸಿಗಲಿದೆ ಎಂದು ವರ್ತಕರು ಹೇಳುತ್ತಿದ್ದಾರೆ.

ಮಾರುಕಟ್ಟೆಗೆ ಸೋಮವಾರ 70 ಟನ್‌ ಹಣ್ಣು ಬಂದಿತ್ತು. ಕಡಿಮೆ ಗುಣಮಟ್ಟದ ಹಣ್ಣು ಕ್ವಿಂಟಲ್ ₹9,000ದಿಂದ ₹12,500ರ ವರೆಗೆ ಮಾರಾಟವಾಗಿದೆ. ಈವರೆಗೆ ಉತ್ತಮ ಗುಣಮಟ್ಟದ ಹಣ್ಣು ಕ್ವಿಂಟಲ್‌ಗೆ ₹13,000ದಿಂದ, ₹23,500ರವರೆಗೂ ಬೆಲೆ ಸಿಕ್ಕಿದೆ.

ಕಳೆದ ಮೂರು ವಾರದಿಂದ ಹಣ್ಣು ಮಾರುಕಟ್ಟೆಗೆ ಬರಲು ಆರಂಭಿಸಿದೆ. ಈಗ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದೆ. ಫೆಬ್ರುವರಿ ಕೊನೆ ಅಥವಾ ಮಾರ್ಚ್ ವೇಳೆಗೆ ಆವಕದಲ್ಲಿ ಹೆಚ್ಚಳವಾಗಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT