ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾ: ಹುಚ್ಚುನಾಯಿ ಕಚ್ಚಿ 10ಕ್ಕೂ ಹೆಚ್ಚು ಜನರಿಗೆ ಗಾಯ

Published 1 ಜುಲೈ 2024, 14:31 IST
Last Updated 1 ಜುಲೈ 2024, 14:31 IST
ಅಕ್ಷರ ಗಾತ್ರ

ಶಿರಾ: ನಗರಸಭೆ 14ನೇ ವಾರ್ಡ್‌ ಕೋಟೆ ಬಡಾವಣೆ ಹಾಗೂ 3ನೇ ವಾರ್ಡ್‌ ವಿದ್ಯಾನಗರದಲ್ಲಿ ಸೋಮವಾರ ಹುಚ್ಚುನಾಯಿ ಕಚ್ಚಿ ಸುಮಾರು 10 ಮಂದಿ ಗಾಯಗೊಂಡಿದ್ದಾರೆ.

ಕೋಟೆ ಬಡಾವಣೆಯಲ್ಲಿ ಹೆಚ್ಚು ಜನರಿಗೆ ಹುಚ್ಚುನಾಯಿ ಕಚ್ಚಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ರಮೇಶ್, ಬಸವರಾಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವರು ಚಿಕಿತ್ಸೆ ಪಡೆದು ಮನೆಗೆ ತೆರಳಿದರು. ನಗರಸಭೆ ಸಿಬ್ಬಂದಿ ಲಿಂಗರಾಜು ಗಾಯಗೊಂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋಟೆ ಬಡಾವಣೆಯ ಹಲವಾರು ಮಂದಿ ನಗರಸಭೆಗೆ ಆಗಮಿಸಿ ಅಧಿಕಾರಿಗಳ ಗಮನಕ್ಕೆ ತಂದರು. ಹುಚ್ಚುನಾಯಿಯನ್ನು ಸಾರ್ವಜನಿಕರು ಸಾಯಿಸಿದರು.

ನಗರಸಭೆ ಪೌರಾಯುಕ್ತ ರುದ್ರೇಶ್, ನಗರಸಭೆ ಅಧ್ಯಕ್ಷೆ ಪೂಜಾ, ಸದಸ್ಯ ಬಿ.ಎಂ.ರಾಧಾಕೃಷ್ಣ, ರಫೀವುಲ್ಲಾ, ಖಾದರ್ ಖಾನ್, ಅರೇಹಳ್ಳಿ ರಮೇಶ್, ತಿಮ್ಮಣ್ಣ ಆಸ್ಪತ್ರೆಗೆ ತೆರಳಿ ವೈದ್ಯರು ಮತ್ತು ಗಾಯಾಳುಗಳ ಜೊತೆ ಚರ್ಚೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT