ಬುಧವಾರ, ಅಕ್ಟೋಬರ್ 21, 2020
22 °C

ದೇವಾಲಯದ ಶೆಟರ್‌ ಮುರಿದು ವಿಗ್ರಹ ಕಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ತಾಲ್ಲೂಕಿನ ಬಿದನಗೆರೆ ಗ್ರಾಮದ ತೋಪಿನ ರಂಗಸ್ವಾಮಿ ದೇವಾಲಯದ ಶೆಟರ್ ಮುರಿದು ಒಳ ಪ್ರವೇಶಿಸಿದ ಕಳ್ಳರು ನಾಲ್ಕು ಪಂಚಲೋಹದ ವಿಗ್ರಹಗಳನ್ನು ಕದ್ದಿದ್ದಾರೆ.

ದೇವಾಲಯ ರಾಷ್ಟ್ರೀಯ ಹೆದ್ದಾರಿ 75ರ ಬೈಪಾಸ್ ರಸ್ತೆಗೆ ಹೊಂದಿಕೊಂಡಿದೆ. ಕಳ್ಳರು ಗುರುವಾರ ರಾತ್ರಿ ರಸ್ತೆ ಬದಿಯ ವಿದ್ಯುತ್ ಕಂಬದಿಂದ ಅಕ್ರಮವಾಗಿ ಸಂಪರ್ಕ ಪಡೆದು ದೇವಾಲಯದ ಗ್ರೀಲ್ ಮತ್ತು ಶೆಟರ್‌ಗಳನ್ನು ಕಟ್ಟರ್ ಬಳಸಿ ಮುರಿದು ಒಳ ಪ್ರವೇಶಿಸಿ ವಿಗ್ರಹ ಕದ್ದಿದ್ದಾರೆ.

ಅರ್ಚಕ ರಂಗಸ್ವಾಮಿ ಕುಣಿಗಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಬಿದನಗೆರೆ ತೋಪಿನ ರಂಗಸ್ವಾಮಿ ದೇವಾಲಯದಲ್ಲಿ ನಾಲ್ಕನೆ ಬಾರಿಗೆ ಕಳ್ಳತನ ನಡೆದಿದೆ. ತಾಲ್ಲೂಕಿನಲ್ಲಿ ಜಾನುವಾರು ಕಳ್ಳತನ, ಮನೆಗಳ್ಳತನ, ದೇವಾಲಯಗಳಲ್ಲಿ ಕಳ್ಳತನ, ಸರಗಳ್ಳತನ ಪ್ರಕರಣ ನಿರಂತರವಾಗಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಚಾಲಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿರುವ ಪ್ರಕರಣಗಳು ನಡೆಯುತ್ತಿದೆ ಪೊಲೀಸರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು