ಪ್ರಯಾಣಿಕನನ್ನೇ ದೋಚಿದರು

ಭಾನುವಾರ, ಮೇ 26, 2019
32 °C

ಪ್ರಯಾಣಿಕನನ್ನೇ ದೋಚಿದರು

Published:
Updated:

ಕುಣಿಗಲ್: ಬೆಂಗಳೂರಿನಿಂದ ಹಾಸನಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದವನನ್ನೇ ಕಟ್ಟಿ ಹಾಕಿ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.

ಹರೀಶ್ ಎಂಬುವವರು ಬೆಂಗಳೂರಿನಿಂದ ಸ್ವಗ್ರಾಮ ರಂಗನತಿಟ್ಟಿಗೆ ಬರಲು ಗೊರಗುಂಟೆಪಾಳ್ಯದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು. ಆಗ ಬಂದ ಇಂಡಿಕಾ ಕಾರಿನವರು ಹಾಸನಕ್ಕೆ ಹೋಗುವುದಾಗಿ ತಿಳಿಸಿದರು. ಈ ಮೊದಲೇ ಕಾರಿನಲ್ಲಿ ಪ್ರಯಾಣಿಕರಿದ್ದ ಕಾರಣ ಹರೀಶ್ ಹತ್ತಿದರು.

ಸೋಲೂರಿನ ಬಳಿ ಬಂದಾಗ ಉಳಿದ ಪ್ರಯಾಣಿಕರು ಇಳಿದಿದ್ದು, ಹರೀಶ್ ಒಬ್ಬರೇ ಇದ್ದರು. ಕಾರಿನಲ್ಲಿದ್ದವರು ಹರೀಶ್ ಅವರನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಚಿನ್ನದ ಸರ, ಬ್ರಾಸ್‌ಲೈಟ್, ಉಂಗುರ ಮತ್ತು ₹ 20 ಸಾವಿರ, ಮೊಬೈಲ್ ದೋಚಿ, ಹರೀಶ್ ಅವರನ್ನು ತಾಲ್ಲೂಕಿನ ಕಣಿವೆಪಾಳ್ಯ ಬಳಿ ಎಸೆದು ಹೋಗಿದ್ದಾರೆ. ನಂತರ ಕಟ್ಟುಗಳನ್ನು ಬಿಚ್ಚಿಕೊಂಡು ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !