ರೈತರ ಮೇಲೆ ಚಿರತೆ ದಾಳಿ

7

ರೈತರ ಮೇಲೆ ಚಿರತೆ ದಾಳಿ

Published:
Updated:

ತುಮಕೂರು: ತಿಪಟೂರು ತಾಲ್ಲೂಕು ಎಚ್‌.ಮುದ್ದೇನಹಳ್ಳಿ ತಾಂಡಾದ ರೈತ ಸುರೇಶ್ ನಾಯ್ಕ ಎಂಬುವವರ ಮೇಲೆ ಭಾನುವಾರ ರಾತ್ರಿ ಚಿರತೆ ದಾಳಿ ಮಾಡಿ ಗಾಯಗೊಳಿಸಿದೆ.

ಸುರೇಶ್ ಕೊಟ್ಟಿಗೆಯಲ್ಲಿ ಮಲಗಿದ್ದು ಅಲ್ಲಿ ಎರಡು ಹಸುಗಳು ಇದ್ದವು. ಸುರೇಶ್ ಅವರ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ. ಸುರೇಶ್ ಅವರ ಬಾಯಿ, ಕುತ್ತಿಗೆ ಮತ್ತು ಬೆನ್ನಿಗೆ ಚಿರತೆ ಪರಚಿದೆ. ಆಗ ಅವರು ಚಿರತೆಯನ್ನು ಜೋರಾಗಿ ತಳ್ಳಿದ್ದು ಅದು ಪರಾರಿಯಾಗಿದೆ.

ಈ ಭಾಗದಲ್ಲಿ ಆಗಾಗ್ಗೆ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಜನರು ಗಾಬರಿಗೊಂಡಿದ್ದಾರೆ. ಚಿರತೆಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !