ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು |ಈರುಳ್ಳಿ ಮತ್ತಷ್ಟು ಅಗ್ಗ; ಟೊಮೆಟೊ ಏರಿಕೆ

ಬೇಳೆ, ಧಾನ್ಯ ಅಲ್ಪ ಹೆಚ್ಚಳ; ಕೋಳಿ ಮಾಂಸ ಮತ್ತೆ ದುಬಾರಿ
Published 24 ಡಿಸೆಂಬರ್ 2023, 6:07 IST
Last Updated 24 ಡಿಸೆಂಬರ್ 2023, 6:07 IST
ಅಕ್ಷರ ಗಾತ್ರ

ತುಮಕೂರು: ತರಕಾರಿ, ಧಾನ್ಯ, ಅಕ್ಕಿ, ಬೇಳೆ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದ್ದರೆ, ಹಣ್ಣುಗಳ ದರ ಕೊಂಚ ಕಡಿಮೆಯಾಗಿದೆ. ಕೋಳಿ ಮಾಂಸದ ಬೆಲೆ ಎರಡು ವಾರದಿಂದ ಗಗನ ಮುಖಿಯಾಗಿದೆ.

ಟೊಮೆಟೊ ದರ ಏರಿಕೆ:

ಕಣ್ಣಾ ಮುಚ್ಚಾಲೆ ಆಡುತ್ತಿರುವ ಟೊಮೆಟೊ ದರ ಈ ವಾರ ಮತ್ತೆ ಏರಿಕೆಯತ್ತ ಸಾಗಿದೆ. ಎರಡು ವಾರದಿಂದ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಕೆ.ಜಿ ₹25–30ಕ್ಕೆ ಏರಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ₹40–50ಕ್ಕೆ ಮಾರಾಟವಾಗುತ್ತಿದೆ. ಹಿಂದಿನ ಎರಡು ವಾರದಿಂದ ಇಳಿಕೆಯತ್ತ ಸಾಗಿರುವ ಈರುಳ್ಳಿ ಬೆಲೆ ಕೆ.ಜಿ ₹30–35ಕ್ಕೆ ತಗ್ಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಬಹುದು ಎಂದು ಹೇಳಲಾಗುತ್ತಿದೆ. ಬೆಳ್ಳುಳ್ಳಿ ಕೆ.ಜಿ ₹180–200ಕ್ಕೆ ಹೆಚ್ಚಳವಾಗಿದೆ.

ತರಕಾರಿ:

ಬೀಟ್ರೂಟ್, ಆಲೂಗಡ್ಡೆ, ತೊಂಡೆಕಾಯಿ, ಕಾಪ್ಸಿಕಂ ಧಾರಣೆ ಏರಿಕೆಯಾಗಿದ್ದರೆ; ಹಾಗಲಕಾಯಿ, ಮೂಲಂಗಿ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ತರಕಾರಿಗಳ ಆವಕ ಕಡಿಮೆ ಇರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ ಹೆಚ್ಚಳವಾಗಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಅವರೆಕಾಯಿ ಮಾರುಕಟ್ಟೆಗೆ ಕಾಲಿಟ್ಟಿದ್ದು, ಬೆಲೆ ದುಬಾರಿಯಾಗಿಯೇ ಇದೆ. ನಾಟಿ ಕಾಯಿ ಕೆ.ಜಿ ₹50–60, ಹುಣಸೂರು ಕಾಯಿ ಕೆ.ಜಿ ₹40–50ಕ್ಕೆ ಸಿಗುತ್ತಿದೆ.

ಮೆಂತ್ಯ ಸೊಪ್ಪು ಅಗ್ಗ:

ಮೆಂತ್ಯ ಸೊಪ್ಪು ದರ ಒಂದೇ ವಾರದಲ್ಲಿ ಅರ್ಧದಷ್ಟು ಕಡಿಮೆಯಾಗಿದ್ದು, ಕೆ.ಜಿಗೆ 30 ಕಡಿಮೆಯಾಗಿದೆ. ಉಳಿದ ಸೊಪ್ಪಿನ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಕೊತ್ತಂಬರಿ ಸೊಪ್ಪು ಕೆ.ಜಿ ₹50–60, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹20–30, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರಾಟವಾಗುತ್ತಿದೆ.

ದಾಳಿಂಬೆ, ಪೈನಾಪಲ್ ಅಗ್ಗ:

ಗಗನ ಮುಖಿಯಾಗಿದ್ದ ದಾಳಿಂಬೆ ಹಣ್ಣಿನ ಧಾರಣೆ ಎರಡು ವಾರದಿಂದ ಇಳಿಕೆಯತ್ತ ಮುಖ ಮಾಡಿದ್ದು, ಈ ವಾರ ಕೆ.ಜಿ ₹180ಕ್ಕೆ ಬಂದು ನಿಂತಿದೆ. ಹಿಂದಿನ ಕೆಲ ವಾರಗಳಲ್ಲಿ ಕೆ.ಜಿ ₹250ರ ವರೆಗೂ ಹೆಚ್ಚಳವಾಗಿತ್ತು. ಕೆಲ ದಿನಗಳಿಂದ ಪೈನಾಪಲ್ ದರ ಸಹ ಕಡಿಮೆಯಾಗುತ್ತಾ ಸಾಗಿದ್ದು, ಕೆ.ಜಿ ₹40ಕ್ಕೆ ಇಳಿಕೆ ಕಂಡಿದೆ. ಸೀತಾಫಲ ಕೆ.ಜಿ ₹150 ಇದೆ. ಉಳಿದ ಹಣ್ಣುಗಳ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ.

ಅಡುಗೆ ಎಣ್ಣೆ:

ಪಾಮಾಯಿಲ್ ಬೆಲೆಯಲ್ಲಿ ಅಲ್ಪ ಕಡಿಮೆಯಾಗಿರುವುದನ್ನು ಹೊರತುಪಡಿಸಿದರೆ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಗೋಲ್ಡ್‌ವಿನ್ನರ್ ಕೆ.ಜಿ ₹107–110, ಪಾಮಾಯಿಲ್ ಕೆ.ಜಿ ₹83–85, ಕಡಲೆಕಾಯಿ ಎಣ್ಣೆ ಕೆ.ಜಿ ₹152–160ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಧಾನ್ಯ– ಬೇಳೆ: ಬೇಳೆ ಕಾಳುಗಳು, ಧಾನ್ಯಗಳ ಧಾರಣೆ ಅಲ್ಪ ಮಟ್ಟದಲ್ಲಿ ಹೆಚ್ಚಳವಾಗಿದೆ. ತೊಗರಿ ಬೇಳೆ, ಕಡಲೆ ಬೇಳೆ, ಉದ್ದಿನ ಬೇಳೆ, ಹೆಸರು ಬೇಳೆ, ಗೋಧಿ ಕೊಂಚ ಏರಿಕೆಯಾಗಿದ್ದರೆ, ಅವರೆಕಾಳು, ಬಟಾಣಿ, ಕಡಲೆ ಬೀಜ, ಸಕ್ಕರೆ ಅಲ್ಪ ಮಟ್ಟದಲ್ಲಿ ಇಳಿಕೆ ದಾಖಲಿಸಿದೆ.

Nethravathi M.
Nethravathi M.

ಮಸಾಲೆ ಪದಾರ್ಥ:

ಮಸಾಲೆ ಪದಾರ್ಥಗಳಲ್ಲಿ ಜೀರಿಗೆ, ಮೆಂತ್ಯ, ಲವಂಗ, ಗಸಗಸೆ, ಬಾದಾಮಿ, ದ್ರಾಕ್ಷಿ ದರ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಕ್ಕಿ ಬೆಲೆ ಪ್ರತಿ ವಾರವೂ ಏರಿಕೆಯತ್ತಲೇ ಮುಖ ಮಾಡಿದೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹500–550, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹230–240, ಹುಣಸೆಹಣ್ಣು ₹80–200, ಕಾಳುಮೆಣಸು ಕೆ.ಜಿ ₹650–670, ಜೀರಿಗೆ ಕೆ.ಜಿ ₹520–550, ಸಾಸಿವೆ ಕೆ.ಜಿ ₹85–90, ಮೆಂತ್ಯ ಕೆ.ಜಿ ₹95–100, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹900–1,000, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,400, ಬಾದಾಮಿ ಕೆ.ಜಿ ₹580–600, ಗೋಡಂಬಿ ಕೆ.ಜಿ ₹600–650, ದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಗಗನಮುಖಿ:

ಕ್ರಿಸ್‌ಮಸ್, ಹೊಸ ವರ್ಷಾಚರಣೆ ಸಮೀಪಿಸುತ್ತಿದ್ದಂತೆ ಕೋಳಿ ಮಾಂಸದ ಬೆಲೆ ಗಗನ ಮುಖಿಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹110, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್‌ಲೆಸ್ ಕೆ.ಜಿ ₹200, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹115ಕ್ಕೆ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT