ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ

Last Updated 27 ಜೂನ್ 2021, 3:00 IST
ಅಕ್ಷರ ಗಾತ್ರ

ತುಮಕೂರು: ಅಂದು ತುರ್ತು ಪರಿಸ್ಥಿತಿ ವಿರೋಧಿಸಿದವರೇ ಪ್ರಸ್ತುತ ಅಧಿಕಾರದಲ್ಲಿ ಇದ್ದಾರೆ. ಅಘೋಷಿತ ತುರ್ತು ಪರಿಸ್ಥಿತಿಯನ್ನು ಜನತೆಯ ಮೇಲೆ ಹೇರಿದ್ದಾರೆ ಎಂದು ಚಿಂತಕ ಸಿ.ಯತಿರಾಜು ಟೀಕಿಸಿದರು.

ಸಿಪಿಎಂ, ಸಿಐಟಿಯು ಹಮ್ಮಿಕೊಂಡಿದ್ದ ‘ತುರ್ತು ಪರಿಸ್ಥಿತಿ– ಅಂದು– ಇಂದು, ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಳ್ಳುಗಳ ಸರಮಾಲೆ ಸ್ಥಾಪಿಸಿ, ಜನತೆಯನ್ನು ಜಾತಿ, ಧರ್ಮಗಳ ಹೆಸರಿನಲ್ಲಿ ಕಿತ್ತಾಟಕ್ಕೆ ಹಚ್ಚಿ ಬಂಡವಾಳ
ಗಾರರಿಗೆ ಸುಲಿಗೆ ಮಾಡಲು ಅವಕಾಶ ಮಾಡಿಕೊಟ್ಟವರೇ ಈಗ ತುರ್ತು ಪರಿಸ್ಥಿತಿ ವಿರೋಧಿಸಿ ಕಾರ್ಯಕ್ರಮ ಆಯೋಜಿಸುತ್ತಿರುವುದುಲಜ್ಜೆಗೇಡಿತನ ಎಂದು ಕಿಡಿಕಾರಿದರು.

ಇಂದಿನ ಆರೋಗ್ಯ ದುರಂತದ ಅಡಿಪಾಯ ಸುಳ್ಳಿನ ಮೇಲೆ ನಿಂತಿದೆ. ಮುಂಬರುವ ರಾಜಕಾರಣ ಸುಳ್ಳಿನ ಆಧಾರದ ಮೇಲೆ ನಡೆಯಲಿದೆ.

ಈಗಿನ ತುರ್ತು ಪರಿಸ್ಥಿತಿ ನೆನಪಿಸಿಕೊಂಡರೆ ಭಯವಾಗುತ್ತದೆ. ಆಳುವ ಸರ್ಕಾರಗಳು ತರುತ್ತಿರುವ ಶಾಸನಗಳ ಬಗ್ಗೆ ಸಂಸತ್‌, ವಿಧಾನಸಭೆಯಲ್ಲಿ ಚರ್ಚೆಗಳಿಲ್ಲದೆ ಜಾರಿ ಮಾಡಲಾಗುತ್ತಿದೆ. ಅಘೋಷಿತ ತುರ್ತು ಪರಿಸ್ಥಿತಿಗೆ ಕಾರಣವಾಗಿರುವ ಸರ್ಕಾರಗಳನ್ನು ತೊಲಗಿಸಬೇಕು ಎಂದು ಸಲಹೆ ಮಾಡಿದರು.

ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜು, ‘1975ರಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಇದನ್ನು ವಿರೋಧಿಸಿಸೆರೆವಾಸ ಅನುಭವಿಸಿ ಪ್ರಜೆಗಳ ಪ್ರಜಾತಂತ್ರದ ಕನಸುಗಳನ್ನು ಸಾಕಾರಗೊಳಿಸುವ ಭರವಸೆ ನೀಡಿದ ರಾಜಕೀಯ ಶಕ್ತಿಗಳು ಇಂದು ಅಧಿಕಾರದಲ್ಲಿವೆ’ ಎಂದು ಆತಂಕ
ವ್ಯಕ್ತಪಡಿಸಿದರು.

ಅಮರೇಶ್ವರ ನಾಟಕ ಮಂಡಳಿಯ ಗುಬ್ಬಿ ಚನ್ನಬಸವಯ್ಯ, ‘ತುರ್ತು ಪರಿಸ್ಥಿತಿಯಲ್ಲಿ ನಾಟಕವಾಡಲು ತುಂಬ ಕಷ್ಟಕರವಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಾವಾಗಿತ್ತು’ ಎಂದು ಸ್ಮರಿಸಿದರು.

ಪತ್ರಕರ್ತ ಅಡವೀಶಪ್ಪ, ಮುಖಂಡರಾದ ಸೈಯದ್ ಮುಜೀಬ್, ಎನ್.ಕೆ.ಸುಬ್ರಮಣ್ಯ, ಸಿ.ಅಜ್ಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT