13ರಿಂದ ಬ್ರಾಹ್ಮಣ ವಧು-ವರ ಅನ್ವೇಷಣೆ ಸಮಾವೇಶ

ಶುಕ್ರವಾರ, ಜೂಲೈ 19, 2019
23 °C

13ರಿಂದ ಬ್ರಾಹ್ಮಣ ವಧು-ವರ ಅನ್ವೇಷಣೆ ಸಮಾವೇಶ

Published:
Updated:

ತುಮಕೂರು: ಬೆಂಗಳೂರಿನ ಲಕ್ಷ್ಮೀನರಸಿಂಹಸ್ವಾಮಿ ಚಾರಿಟಬಲ್ ಟ್ರಸ್ಟ್, ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾ, ಮೈಸೂರಿನ ಸಪ್ತಪದಿ ಫೌಂಡೇಷನ್ ಹಾಗೂ ಮಂಗಳ ಸೂತ್ರ ಧಾರ್ಮಿಕ ಪತ್ರಿಕೆ ಸಹಯೋಗದಲ್ಲಿ ಜು.13, 14 ರಂದು ಬೆಳಿಗ್ಗೆ 8.30ಕ್ಕೆ ನಗರದ ವಿಶಾಲಕ್ಷಮ್ಮ ಸದಾಶಿವಯ್ಯ ಸಭಾಭವನದಲ್ಲಿ 26ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರರ ಅನ್ವೇಷಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ವಧು -ವರರು, ವಿಚ್ಛೇದಿತರು, ಅಂಗವಿಕಲರು, ವಿಧವೆ-ವಿಧರರು ಭಾಗವಹಿಸಬಹುದು. ಎಲ್ಲ ಜಿಲ್ಲೆಗಳಿಂದ ವಧು, ವರರು ಪಾಲ್ಗೊಳ್ಳುತ್ತಿದ್ದಾರೆ.

ತುಮಕೂರು ಸುತ್ತಮುತ್ತಲಿನ ವಧು-ವರರು ಜು12ರ ಒಳಗೆ ಇತ್ತೀಚಿನ ಎರಡು ಭಾವಚಿತ್ರ, ಜಾತಕ, 2 ವ್ಯಕ್ತಿ ಮಾಹಿತಿಯೊಂದಿಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 9449425536, 9449425538 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !