ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ತುಮಕೂರು: ಮುಳುಗುವ ರಸ್ತೆಗೆ ಮುಕ್ತಿ ಯಾವಾಗ?

ಮೈಲಾರಿ ಲಿಂಗಪ್ಪ
Published : 27 ಜುಲೈ 2024, 5:14 IST
Last Updated : 27 ಜುಲೈ 2024, 5:14 IST
ಫಾಲೋ ಮಾಡಿ
Comments
ಅಂತರಸನಹಳ್ಳಿ ಸೇತುವೆ ಹತ್ತಿರದ ಚರಂಡಿಯ ಸ್ಥಿತಿ
ಅಂತರಸನಹಳ್ಳಿ ಸೇತುವೆ ಹತ್ತಿರದ ಚರಂಡಿಯ ಸ್ಥಿತಿ
ಶೆಟ್ಟಿಹಳ್ಳಿ ಸೇತುವೆಯಲ್ಲಿ ನೀರು ಸಂಗ್ರಹ (ಸಂಗ್ರಹ ಚಿತ್ರ)
ಶೆಟ್ಟಿಹಳ್ಳಿ ಸೇತುವೆಯಲ್ಲಿ ನೀರು ಸಂಗ್ರಹ (ಸಂಗ್ರಹ ಚಿತ್ರ)
ಅಂತರಸನಹಳ್ಳಿ ಸೇತುವೆ ಬಳಿ ಮೊಳಕಾಲುದ್ದ ಗುಂಡಿಗಳು ಬಿದ್ದಿದ್ದು ಮಳೆ ಬಂದಾಗ ಗಮನಿಸದೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಧಿಕಾರಿಗಳು ತಾತ್ಕಾಲಿಕವಾಗಿ ಗುಂಡಿ ಮುಚ್ಚುತ್ತಾರೆ. ಎರಡು ದಿನಗಳ ನಂತರ ಮತ್ತೆ ಯಥಾಸ್ಥಿತಿಗೆ ಬರುತ್ತದೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸಬೇಕು. ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕು
ಜಯರಾಮ್ ಆಟೊ ಚಾಲಕ ಅಂತರಸನಹಳ್ಳಿ
ವಾಹನ ಓಡಾಟಕ್ಕೆ ಸಮಸ್ಯೆ ಸೇತುವೆ ನಿರ್ಮಾಣವಾದ ದಿನದಿಂದ ಇಲ್ಲಿ ಸಮಸ್ಯೆಯಾಗುತ್ತಿದೆ. ವಾಹನಗಳು ಮುಂದೆ ಸಾಗಲು ಆಗದಷ್ಟು ನೀರು ನಿಲ್ಲುತ್ತದೆ. ಅಂತರಸನಹಳ್ಳಿ ಸೇತುವೆ ಬಳಿ ಯಾವುದೇ ಚರಂಡಿ ರಾಜ ಕಾಲುವೆ ಇಲ್ಲ. ನಾಲ್ಕು ಕಡೆಯ ನೀರು ತಗ್ಗು ಪ್ರದೇಶವಾದ ಸೇತುವೆ ಹತ್ತಿರ ನಿಲ್ಲುತ್ತಿದೆ. ಇದರಿಂದಲೇ ಸಾಕಷ್ಟು ತೊಂದರೆಯಾಗುತ್ತಿದೆ.
ಸಿದ್ದಗಂಗಯ್ಯ ಅಂತರಸನಹಳ್ಳಿ
ನೀರು ಸರಾಗವಾಗಿ ಹರಿಯಬೇಕು ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಮಾಡಿದರೆ ಜನರಿಗೆ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಯಲ್ಲಾಪುರದ ನೀರು ಸೇತುವೆ ಬಳಿಗೆ ಹರಿದು ಬರುತ್ತಿದೆ. ಚರಂಡಿ ಮಾಯವಾಗಿರುವ ರಾಜ ಕಾಲುವೆ ದುರಸ್ತಿ ಮಾಡಬೇಕು.
ಪುರುಷೋತ್ತಮ ಅಂತರಸನಹಳ್ಳಿ
ಸಾವಿರಾರು ಜನರಿಗೆ ತೊಂದರೆ ಮಳೆಗಾಲದಲ್ಲಿ ಬಂದು ಹೋಗುವ ಅಧಿಕಾರಿಗಳು ನಂತರದ ದಿನಗಳಲ್ಲಿ ಈ ಬಗ್ಗೆ ಯೋಚನೆಯೇ ಮಾಡುವುದಿಲ್ಲ. ಬೇಸಿಗೆ ಸಮಯದಲ್ಲಿ ಯೋಜನೆ ರೂಪಿಸಿ ನೀರು ನಿಲ್ಲದಂತೆ ತಡೆಯಲು ಕಾಮಗಾರಿ ಕೈಗೊಳ್ಳಬೇಕು. ಹಲವು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಶೆಟ್ಟಿಹಳ್ಳಿ ಸೇತುವೆ ಸಂಪರ್ಕ ಕಡಿತವಾದರೆ ಸಾವಿರಾರು ಜನರು ತೊಂದರೆಗೆ ಒಳಗಾಗುತ್ತಾರೆ.
ಆರ್‌.ಲೋಕೇಶ್‌ ಶೆಟ್ಟಿಹಳ್ಳಿ
ಸಮಸ್ಯೆ ಬಗೆಹರಿಸಲಿ ಶೆಟ್ಟಿಹಳ್ಳಿ ಸೇತುವೆಯಲ್ಲಿ ನೀರು ನಿಂತಾಗ ಪಂಪ್‌ ಸೆಟ್‌ ಸಹಾಯದಿಂದ ಖಾಲಿ ಮಾಡಿಸುತ್ತಾರೆ. ಹಲವು ದಿನಗಳಿಂದ ಇದೇ ರೀತಿ ಆಗುತ್ತಿದೆ. ಈ ಸೇತುವೆ ಬಳಿ ವಾಹನ ಸಂಚಾರಕ್ಕೆ ಯಾವಾಗ ನಿರ್ಬಂಧ ಇರುತ್ತದೆ ಯಾವಾಗ ಮುಕ್ತವಾಗಿರುತ್ತದೆ ಎಂಬುವುದೇ ತಿಳಿಯುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹಾರ ಕಲ್ಪಿಸಲು ಮುಂದಾಗಬೇಕು.
ದಿಲೀಪ್ ಶೆಟ್ಟಿಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT