ಯಡಿಯೂರಪ್ಪ ಸರ್ಟಿಫಿಕೇಟ್ ನಮಗೇನು ಬೇಕಿಲ್ಲ; ಡಾ.ಪರಮೇಶ್ವರ

7

ಯಡಿಯೂರಪ್ಪ ಸರ್ಟಿಫಿಕೇಟ್ ನಮಗೇನು ಬೇಕಿಲ್ಲ; ಡಾ.ಪರಮೇಶ್ವರ

Published:
Updated:

ತುಮಕೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚನೆ ಮಾಡಿರುವುದೇ ರಾಜ್ಯದ ಜನರಿಗೆ ಒಳ್ಳೆಯದು ಮಾಡುವುದಕ್ಕಾಗಿ. ಯಡಿಯೂರಪ್ಪ ಅವರ ಸರ್ಟಿಫಿಕೇಟ್ ನಮಗೇನು ಬೇಕಿಲ್ಲ. ನಮಗೆ ಬೇಕಾಗಿರುವುದು ಜನರ ಸರ್ಟಿಫಿಕೇಟ್. ಅದು ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಈ ಸರ್ಕಾರ ಬರೀ ಸಾಲ ಮನ್ನಾ ಮಾಡುವ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವುದು, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ, ಸಚಿವ ಸಂಪುಟ ವಿಸ್ತರಣೆಯಲ್ಲಿಯೇ ಕಾಲಹರಣ ಮಾಡುತ್ತಿದೆ ಎಂಬ ಯಡಿಯೂರಪ್ಪ ಅವರ ಆರೋಪ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಯಡಿಯೂರಪ್ಪ ಅವರು ತಮ್ಮ ಹಿಂದಿನ ಆಡಳಿತದ ನೆನಪು ಮಾಡಿಕೊಳ್ಳಲಿ. ನಮಗೆ ಅವರೇನು ಹೇಳುವುದು ಬೇಡ ಎಂದು ಕುಟುಕಿದರು.

ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆಯಲ್ಲಿ ಈ ಬಾರಿ ಮಹಿಳೆಯರಿಗೆ, ಯುವಕರಿಗೆ ಹೆಚ್ಚಿನ ಸ್ಥಾನ ನೀಡಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉತ್ಸುಕತೆ ತೋರಿದ್ದಾರೆ ಎಂದರು.

ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆಯಲ್ಲಿ ಅಸಮಾಧಾನ ಇದೆ ಎಂಬುದು ಗೊತ್ತಿಲ್ಲ. ಎರಡೂ ಪಕ್ಷದವರು ಚರ್ಚಿಸಿಯೇ ಉಸ್ತುವಾರಿ ಹಂಚಿಕೆ ಮಾಡಲಾಗಿದೆ ಎಂದರು.

ಹೋಂ ಗಾರ್ಡ್ಸ್‌ಗಳು ಕೆಲಸ ಮಾಡುವುದೇ ಸ್ವಯಂ ಸೇವಕರಾಗಿ (ವಾಲೆಂಟರ್ಸ್). ಅವರನ್ನು ಕೆಲಸದಿಂದ ತೆಗೆದು ಹಾಕಲಾಗುತ್ರದೆ ಎಂಬುದು ಸುಳ್ಳು. ಸರ್ಕಾರ ಅವರ ಸೇವೆಗೆ ಹೆಚ್ಚಿನ ಮೊತ್ತ ನಿಗದಿಪಡಿಸುವುದು, ರೋಟೇಶನ್ ಪ್ರಕಾರ ಕೆಲಸ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ ಎಂದರು.

ಹೋಂ ಗಾರ್ಡ್ಸ್‌ಗಳಿಂದ ಗೃಹ ಇಲಾಖೆ ಕಾರ್ಯಕ್ಕೆ ಹೆಚ್ಚಿನ ಸಹಾಯ ಅಗುತ್ತಿದೆ. ವಿಶೇಷವಾಗಿ ಚುನಾವಣೆ ಸಂದರ್ಭಗಳಲ್ಲಿ ಅವರ ಕಾರ್ಯ ಗಮನಾರ್ಹ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !