ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ, ಸದಸ್ಯರ ಆಯ್ಕೆ

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ
Last Updated 3 ಜೂನ್ 2020, 11:03 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲಾ ಪಂಚಾಯಿತಿ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರ ಮೂರನೇ ಅವಧಿಗೆ ಮಂಗಳವಾರ ಅವಿರೋಧವಾಗಿ ಆಯ್ಕೆ ನಡೆಯಿತು.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಂದಿಕೆರೆ ಕ್ಷೇತ್ರದ ಸದಸ್ಯೆ ಮಂಜುಳಾ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಧುಗಿರಿ ತಾಲ್ಲೂಕು ದೊಡ್ಡೇರಿ ಕ್ಷೇತ್ರದ ಸದಸ್ಯ ಚೌಡಪ್ಪ, ಸಾಮಾಜಿಕ ನ್ಯಾಯ
ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಂದನಕೆರೆ ಕ್ಷೇತ್ರದ ರಾಮಚಂದ್ರಯ್ಯ ಆಯ್ಕೆಯಾಗಿದ್ದಾರೆ.

ಉಳಿದಂತೆ ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಲತಾ ರವಿಕುಮಾರ್ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶಾರದ ನರಸಿಂಹಮೂರ್ತಿ ಮುಂದು ವರೆದಿದ್ದಾರೆ.

ವಿವಿಧ ಸಮಿತಿಗಳಿಗೆ ಆಯ್ಕೆಯಾದ ಸದಸ್ಯರ ಪಟ್ಟಿ.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ: ಗೌರಮ್ಮ, ಎಸ್.ಟಿ.ಮಹಾಲಿಂಗಯ್ಯ, ಭಾರತಿ ಹಿತೇಶ್, ಜೆ.ಶಿವಮ್ಮ, ಗಾಯಿತ್ರಿದೇವಿ, ಎಸ್.ಪದ್ಮ.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ: ಎಸ್.ರಾಮಕೃಷ್ಣ, ತಿಮ್ಮಯ್ಯ, ಗಾಯತ್ರಿಬಾಯಿ, ಜಿ.ಎಚ್.ಜಗನ್ನಾಥ್, ಎಚ್‌.ಕೆಂಚಮಾರಯ್ಯ, ಪಿ.ಮಂಜುಳಾ.

ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ನಾರಾಯಣಮೂರ್ತಿ, ಎಚ್.ಕೆಂಚಮಾರಯ್ಯ, ಎಸ್.ಟಿ.ಮಹಾಲಿಂಗಯ್ಯ, ಯಶೋದಾ ಗಂಗರಾಜು, ಜಿ.ಆರ್.ಶಿವರಾಮಯ್ಯ, ಲಕ್ಷ್ಮಿನರಸಯ್ಯ.

ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ: ಎಸ್.ರಾಮಕೃಷ್ಣ, ವೈ.ಸಿದ್ದರಾಮಯ್ಯ, ವೈ.ಎಚ್.ಹುಚ್ಚಯ್ಯ, ಬೊಮ್ಮಯ್ಯ, ಕೆ.ಆರ್.ಭಾರತಿ ಹಿತೇಶ್, ಚನ್ನಮಲ್ಲಪ್ಪ.

ಸಾಮಾನ್ಯ ಸ್ಥಾಯಿ ಸಮಿತಿ: ಯಶೋದಾ ಗಂಗರಾಜು, ಕೆ.ನರಸಿಂಹಮೂರ್ತಿ, ಎಸ್.ಎಚ್.ರಾಜಣ್ಣ, ಡಾ.ಜಿ.ಸಿ.ನವ್ಯಬಾಬು, ಜಿ.ವಿ.ರೇಣುಕಾ, ಎಚ್.ಆರ್.ಅನಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT