ನಟ ಸದಾಶಿವ ಸಾಲಿಯಾನ್‌ ನಿಧನ

7

ನಟ ಸದಾಶಿವ ಸಾಲಿಯಾನ್‌ ನಿಧನ

Published:
Updated:
ಸದಾಶಿವ ಸಾಲಿಯಾನ್

ಉಡುಪಿ: ಖ್ಯಾತ ತುಳು ಹಾಗೂ ಕನ್ನಡ ಚಿತ್ರನಟ ಸದಾಶಿವ ಸಾಲಿಯಾನ್‌ ಭಾನುವಾರ ಮುಂಬೈನಲ್ಲಿ ನಿಧನರಾದರು.

ಉಡುಪಿಯ ತೆಂಕ ಎರ್ಮಾಳ್‌ನವರಾಗಿದ್ದ ಸದಾಶಿವ ಸಾಲಿಯಾನ್ ಕಿರಿವಯಸ್ಸಿನಲ್ಲಿಯೇ ಮುಂಬೈಗೆ ತೆರಳಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದರು. ಮುಂಬೈ ನಾಟಕರಂಗದಲ್ಲಿ ಹೆಸರು ಮಾಡಿದ್ದ ಸಾಲಿಯಾನ್‌, ತುಳು ಹಾಗೂ ಕನ್ನಡ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದರು. 

ಅವರ ಅಭಿಯನಯದ ಪೆಟ್ಟಾಯಿ ಪಿಲಿ ತುಳುಚಿತ್ರ ದೊಡ್ಡ ಹೆಸರು ತಂದುಕೊಟ್ಟಿತ್ತು. ಸತ್ಯ ಓಲುಂಡು, ಭಾಗ್ಯವೆಂತೆದಿ, ಬದ್ಕೆರೆಬುಡ್ಲೆ ತುಳುಚಿತ್ರಗಳು ಸೇರಿದಂತೆ ಭಾಗ್ಯವಂತರು, ಸಿಡಿದೆದ್ದ ಪಾಂಡವರು, ಅನಾಥ ರಕ್ಷಕ, ಕಾಲೇಜು ರಂಗ ಸೇರಿದಂತೆ ಸುಮಾರು 50 ಚಿತ್ರಗಳಲ್ಲಿ ಸದಾಶಿವ ಸಾಲಿಯನ್‌ ಅಭಿನಯಿಸಿದ್ದಾರೆ. ಖಳನಟನಾಗಿ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧರಾಗಿದ್ದರು.

ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲೂ ನಟಿಸಿದ್ದ ಸಾಲಿಯಾನ್‌, ಅನಾರೋಗ್ಯದ ಕಾರಣ ಕೆಲ ವರ್ಷಗಳಿಂದ ನಟನೆಯಿಂದ ದೂರ ಸರಿದಿದ್ದರು. ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ನೆರವೇರಿತು ಎಂದು ಮೂಲಗಳು ತಿಳಿಸಿವೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !