ಖಾಸಗಿ, ಕೆಎಸ್ಆರ್ಟಿಸಿ ಬಸ್ ಸೇವೆ ಅಲಭ್ಯ: ಹಲವೆಡೆ ಪ್ರತಿಭಟನೆ
ಭಾರತ ಬಂದ್: ಉಡುಪಿ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ

ಉಡುಪಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸೋಮವಾರ ಕರೆ ನೀಡಿರುವ ‘ಭಾರತ ಬಂದ್’ಗೆ ಹಲವು ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಕೆನರಾ ಬಸ್ ಮಾಲೀಕರ ಸಂಘ ಬಂದ್ಗೆ ಸಹಮತ ಸೂಚಿಸಿದ್ದು, ಖಾಸಗಿ ಬಸ್ ಸಂಚಾರ ಸೇವೆ ವ್ಯತ್ಯಯವಾಗಲಿದೆ. ನಗರದ ಬಹುತೇಕ ಸಂಚಾರ ವ್ಯವಸ್ಥೆ ಖಾಸಗಿ ಬಸ್ಗಳನ್ನು ಅವಲಂಬಿಸಿರುವುದರಿಂದ ಸಾರ್ವಜನಿಕರಿಗೆ ಬಂದ್ ಬಿಸಿ ತಟ್ಟುವ ಸಾಧ್ಯತೆಗಳು ಹೆಚ್ಚಿವೆ.
ಕೆಎಸ್ಆರ್ಟಿಸಿ ಬಸ್ ಸೇವೆ ಕೂಡ ಅಲಭ್ಯವಾಗಲಿದೆ. ಸಿಟಿ ಬಸ್ ನೌಕರರ ಸಂಘ, ಜೆಡಿಎಸ್ ಪಕ್ಷ, ಆಶ್ರಯದಾತ ಆಟೋ ಯೂನಿಯನ್ ಕೂಡ ಬಂದ್ಗೆ ಬೆಂಬಲ ನೀಡಿವೆ. ಬಂದ್ಗೆ ಬೆಂಬಲ ನೀಡುವಂತೆ ಭಾನುವಾರ ಕಾಂಗ್ರೆಸ್ ಮುಖಂಡರು ನಗರದ ವ್ಯಾಪಾರಿಗಳಿಗೆ ಮನವಿ ಮಾಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.