ಕುಂದಾಪುರ: ಅಮಾಸೆಬೈಲು ಕೆಳಸುಂಕಕ್ಕೆ 15 ದಿನಗಳಿಂದ ಬಸ್ ಸೇವೆ ಆರಂಭವಾಗಿದೆ. ಮರವಂತೆ– ಬಡಾಕೆರೆ ಬಸ್ ಓಡಾಟಕ್ಕೆ ಇದ್ದ ತಡೆ ತೆರವಾಗಿದ್ದು ಅಲ್ಲಿಗೂ ಬಸ್ ಹೋಗುತ್ತಿದೆ. ಹೊಸ ಬಸ್ ಮಾರ್ಗಗಳ ಸರ್ವೆಗೆ ಬಂದ ಸೂಚನೆಯಂತೆ ಸರ್ವೆ ಕಾರ್ಯ ನಡೆದಿದೆ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯತಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಂಗಳೂರು ಕೋಡಿ ಭಾಗಕ್ಕೆ ಹೆಚ್ಚುವರಿ ಬಸ್ ಬೇಕು ಎಂದು ಅಭಿಜಿತ್ ಪೂಜಾರಿ ಹೇರಿಕುದ್ರು ಬೇಡಿಕೆ ಮಂಡಿಸಿದರು. ಹಳೆ ಬಸ್ಗಳನ್ನು ಇಲ್ಲಿಗೆ ನೀಡಲಾಗುತ್ತಿದೆ ಎಂದು ಕೋಣಿ ನಾರಾಯಣ ಆಚಾರ್ ಆಕ್ಷೇಪಿಸಿದರು. ಕೋಟ ಹೈಸ್ಕೂಲ್ ಬಳಿ ಬಸ್ ನಿಲುಗಡೆ ಬೇಕು ಎಂದು ಝಹೀರ್ ಅಹ್ಮದ್ ಒತ್ತಾಯಿಸಿದರು. ಸದ್ಯ ಹೊಸ ಬಸ್ ಬಂದಿಲ್ಲ, ಹೊಸ ಮಾರ್ಗಗಳಿಗೆ ಬಸ್ ಓಡಿಸಲು ಇನ್ನೂ ಅನುಮತಿ ದೊರಕಿಲ್ಲ ಎಂದು ಕೆಎಸ್ಆರ್ಟಿಸಿ ಡಿಪೊ ಮೆನೇಜರ್ ಉದಯ ಕುಮಾರ್ ಶೆಟ್ಟಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ್ ಕೋಟ್ಯಾನ್ ಮಾತನಾಡಿ, ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮೃತಪಟ್ಟರೆ ಮರಣ ಪ್ರಮಾಣಪತ್ರ ನೀಡಿ ಸದಸ್ಯರು ಫಲಾನುಭವಿ ಆಗಬಹುದು ಎಂದರು. ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುವ ವೇಳೆ ವಿದ್ಯುತ್ ಕಡಿತ ಮಾಡದಂತೆ ಕೋಣಿ ನಾರಾಯಣ ಆಚಾರ್ ಮೆಸ್ಕಾಂಗೆ ಮನವಿ ಮಾಡಿದರು. ಶಂಕರನಾರಾಯಣ ವಿಭಾಗದಲ್ಲಿ 7 ಹೊಸ ಟ್ರಾನ್ಸ್ಫಾರ್ಮರ್ ಅಳವಡಿಕೆಗೆ ಮಂಜೂರಾತಿಯಾಗಿದೆ ಎಂದು ಮೆಸ್ಕಾಂ ಎಇ ಗುರುಪ್ರಸಾದ್ ತಿಳಿಸಿದರು.

ಬೆಳ್ತಿಗೆ ಅಕ್ಕಿ ಬದಲು ದೊರೆಯುತ್ತಿರುವ ಕುಚ್ಚಲಕ್ಕಿ ಕರಾವಳಿ ಜನ ಸೇವಿಸುವಂಥದ್ದಲ್ಲ ಎಂದು ಅಭಿಜಿತ್ ಪೂಜಾರಿ ಹೇಳಿದರು. ಬಿಪಿಎಲ್ ಪಡಿತರ ಅಕ್ರಮ ಮಾರಾಟ ತಡೆಯಬೇಕು ಎಂದು ಝಹೀರ್ ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಮಹೇಶ್ ಕೆ.ಜಿ. ಸ್ವಾಗತಿಸಿದರು. ಸದಸ್ಯರಾದ ಆಶಾ ಕರ್ವಾಲೊ, ಗಣೇಶ್ ಕುಂಭಾಸಿ, ಚಂದ್ರ ಕಾಂಚನ್, ಸವಿತಾ ಪೂಜಾರಿ ಭಾಗವಹಿಸಿದ್ದರು.