ಗುರುವಾರ , ಅಕ್ಟೋಬರ್ 22, 2020
25 °C

191 ಮಂದಿಗೆ ಸೋಂಕು ದೃಢ: ವೃದ್ಧೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್‌ ಸೋಂಕಿತ ವೃದ್ಧೆ ಮೃತಪಟ್ಟಿದ್ದು, 191 ಮಂದಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ ಉಡುಪಿ ತಾಲ್ಲೂಕಿನ 91, ಕುಂದಾಪುರದ 48, ಕಾರ್ಕಳದ 35 ಹಾಗೂ ಇತರೆ ಜಿಲ್ಲೆಗಳ 17 ಮಂದಿ ಇದ್ದಾರೆ.

132 ಸೋಂಕಿತರಿಗೆ ರೋಗದ ಲಕ್ಷಣಗಳಿದ್ದು, 59 ರೋಗಿಗಳಲ್ಲಿ ಲಕ್ಷಣಗಳು ಕಂಡುಬಂದಿಲ್ಲ. ಕೋವಿಡ್‌ ಆಸ್ಪತ್ರೆಗಳಲ್ಲಿ 34 ಹಾಗೂ ಹೋಂ ಐಸೊಲೇಷನ್‌ನಲ್ಲಿ 157 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶುಕ್ರವಾರ 225 ಸೇರಿ ಇದುವರೆಗೂ 16,917 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು ಕೋವಿಡ್‌ ಪ್ರಕರಣಗಳು 18,985 ಇದ್ದು, ಸಕ್ರಿಯ ಪ್ರಕರಣಗಳು 1,952 ಇವೆ., 163 ಸೋಂಕಿತರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.