ಉಡುಪಿ: ಮಂಗಳವಾರ 136 ಜನರಿಗೆ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಕಾರ್ಕಳ ತಾಲ್ಲೂಕಿನ 65 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ.
136 ಸೋಂಕಿತರಲ್ಲಿ ಉಡುಪಿಯ 66, ಕುಂದಾಪುರದ 54, ಕಾರ್ಕಳದ 16 ಮಂದಿ ಸೇರಿದ್ದು, 78 ಪುರುಷರು, 58 ಮಹಿಳೆಯರಿಗೆ ಸೋಂಕು ತಗುಲಿದೆ. 47 ರೋಗಿಗಳಿಗೆ ಸೋಂಕಿನ ಲಕ್ಷಣಗಳಿದ್ದರೆ 89 ಮಂದಿಗೆ ಲಕ್ಷಣಗಳು ಕಂಡುಬಂದಿಲ್ಲ.
ಕೋವಿಡ್ ಆಸ್ಪತ್ರೆ ಹಾಗೂ ಆರೈಕೆ ಕೇಂದ್ರಗಳಲ್ಲಿ 23, ಹೋಂ ಐಸೊಲೇಷನ್ನಲ್ಲಿ 113 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ 219 ಸೇರಿ ಇದುವರೆಗೂ 19,114 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಪ್ರಕರಣಗಳ ಸಂಖ್ಯೆ 20,994 ಇದ್ದು, ಸಕ್ರಿಯ ಪ್ರಕರಣಗಳು 1,742 ಇವೆ. 176 ಸೋಂಕಿತರು ಮೃತಪಟ್ಟಿದ್ದಾರೆ.