ವಸಂತ ಧಾರ್ಮಿಕ ಶಿಬಿರಕ್ಕೆ ಪಲಿಮಾರು ಶ್ರೀಗಳಿಂದ ಚಾಲನೆ

ಶುಕ್ರವಾರ, ಏಪ್ರಿಲ್ 26, 2019
33 °C

ವಸಂತ ಧಾರ್ಮಿಕ ಶಿಬಿರಕ್ಕೆ ಪಲಿಮಾರು ಶ್ರೀಗಳಿಂದ ಚಾಲನೆ

Published:
Updated:
Prajavani

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಪಲಿಮಾರು ಮಠದಲ್ಲಿ ಹಮ್ಮಿಕೊಂಡಿರುವ ವಸಂತ ಧಾರ್ಮಿಕ ಶಿಬಿರಕ್ಕೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಭಾನುವಾರ ಕೃಷ್ಣಮಠದ ರಾಜಾಂಗಣದಲ್ಲಿ ಚಾಲನೆ ನೀಡಿದರು.

ಆ ಬಳಿಕ ಮಾತನಾಡಿದ ವಿದ್ಯಾಧೀಶ ಸ್ವಾಮೀಜಿ, ಶಾಲಾಪಠ್ಯದಲ್ಲಿ ಸಿಗದೇ ಇರುವ ಪುರಾಣಗಳ ಮಾಹಿತಿ ಹಾಗೂ ಧಾರ್ಮಿಕ ಕಾರ್ಯಗಳ ಬಗ್ಗೆ ಈ ಶಿಬಿರದಲ್ಲಿ ಪಡೆದುಕೊಳ್ಳಬಹುದು ಎಂದರು.

ಸುವಿದ್ಯೇಂದ್ರತೀರ್ಥ ಶ್ರೀಪಾದರು ಮಾತನಾಡಿ, ಶ್ರೀ ವಿದ್ಯಾಮಾನ್ಯತೀರ್ಥರ ಸಂಕಲ್ಪದಂತೆ ಇಪ್ಪತ್ತೆರಡು ವರ್ಷಗಳಿಂದ ಈ ಶಿಬಿರ ನಡೆಯುತ್ತಿದೆ. ಧರ್ಮಾಚರಣೆಯ ಬಗ್ಗೆ ನಮ್ಮ ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಕಲಿಸಿದರೆ, ಸಂಪ್ರದಾಯ, ಆಚರಣೆಗಳು ಉಳಿಯುತ್ತವೆ ಎಂದು ಹೇಳಿದರು. ಮಠದ ವಿದ್ವಾಂಸ ಕಲ್ಮಂಜೆ ವಾಸುದೇವ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !