ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲಾಸ್‌ಏಂಜಲೀಸ್‌ನ ಚಿತ್ರೋತ್ಸವಕ್ಕೆ ಮಾಹೆಯ ಯಕ್ಷಗಾನ ಸಾಕ್ಷ್ಯಚಿತ್ರ

Published 23 ಜೂನ್ 2024, 16:07 IST
Last Updated 23 ಜೂನ್ 2024, 16:07 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌ನ ಅಂತರ್‌ ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರವು ಸಿದ್ಧಪಡಿಸಿರುವ ಯಕ್ಷಗಾನದ ಕುರಿತ ಸಾಕ್ಷ್ಯ ಚಿತ್ರವು ಅಮೆರಿಕದ ಲಾಸ್‌ಏಂಜಲೀಸ್‌ನ ಪ್ರತಿಷ್ಠಿತ ವರ್ಲ್ಡ್‌ ಕಲ್ಚರ್‌ ಪಿಲ್ಮ್‌ ಫೆಸ್ಟಿವಲ್‌-24ರಲ್ಲಿ ಸೆಮಿ ಫೈನಲ್‌ ಸ್ಪರ್ಧಾ ಹಂತಕ್ಕೆ ಆಯ್ಕೆಯಾಗಿದೆ.

ಚಿತ್ರೋತ್ಸವವು ಜುಲೈ 27 ಮತ್ತು 28ರಂದು ನಡೆಯಲಿದೆ. ಈ ಸಾಕ್ಷ್ಯಚಿತ್ರವನ್ನು ಸಿಐಎಸ್‌ಡಿಯ ‘ತುಳುನಾಡಿನ ಸಜೀವ ಸಂಸ್ಕೃತಿಗಳು: ಭಾರತದ ಅರಿವು’  ಯೋಜನೆಯ ಭಾಗವಾಗಿ ತಯಾರಿಸಲಾಗಿದೆ.

ಚಿತ್ರೋತ್ಸವಕ್ಕೆ 40 ದೇಶಗಳಿಂದ ಪ್ರವೇಶಗಳು ಬಂದಿದ್ದು, ಈ ಸಾಕ್ಷ್ಯಚಿತ್ರವು ಕರ್ನಾಟಕದ ಕರಾವಳಿ ಜಿಲ್ಲೆಗಳ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಪ್ರಾದೇಶಿಕ ಕಲೆಯಾದ ಯಕ್ಷಗಾನದ ಭವ್ಯ ಪರಂಪರೆ ಎತ್ತಿಹಿಡಿಯುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮಾಹೆಯ ಐರೋಪ್ಯ ಅಧ್ಯಯನ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಐಎಸ್‌ಡಿಯ ಉಪಕ್ರಮವಾಗಿ ‘ಡಿಸರ್ನಿಂಗ್‌ ಇಂಡಿಯ: ಲಿವಿಂಗ್‌ ಕಲ್ಚರ್ಸ್‌ ಆಫ್‌ ತುಳುನಾಡು’ ಯೋಜನೆ ಕ್ರಿಯಾಶೀಲವಾಗಿದ್ದು, ಇದು ಅಂತರ್‌ ಸಾಂಸ್ಕೃತಿಕ ಸಂವಾದ ಮತ್ತು ಅರಿವನ್ನು ವಿಸ್ತರಿಸುವಲ್ಲಿ ಆಶಯದತ್ತ ಕೇಂದ್ರೀಕೃತವಾಗಿದೆ ಎಂದು ಹೇಳಿದೆ.

ಸಾಕ್ಷ್ಯಚಿತ್ರವನ್ನು ಪ್ರವೀಣ್‌ ಶೆಟ್ಟಿ ಮತ್ತು ನಿತೇಶ್‌ ಅಂಚನ್‌ ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT