’ಚುನಾವಣೆ’ಯ ಮೂಲಕ ಪ್ರಜಾತಂತ್ರದ ಮೊದಲ ಪಾಠ

7

’ಚುನಾವಣೆ’ಯ ಮೂಲಕ ಪ್ರಜಾತಂತ್ರದ ಮೊದಲ ಪಾಠ

Published:
Updated:
ಶುಕ್ರವಾರ ನಡೆದ ಮತದಾನದ ಸರದಿಯ ಸಾಲಿನಲ್ಲಿ ನಿಂತ ವಿದ್ಯಾರ್ಥಿ ಮತದಾರರು. (ಬೈಂದೂರು ಚಿತ್ರ)

ಬೈಂದೂರು : ಶಾಲಾ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ದು, ಅವರಿಗೆ ಕೆಲವು ಜವಾಬ್ದಾರಿಗಳನ್ನು ಒಪ್ಪಿಸಿ ನಾಯಕತ್ವದ ಮಾದರಿಗಳನ್ನು ಸೃಜಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಪ್ರಾತಿನಿಧಿಕ ಹೊಣೆಗಾರಿಕೆಯ ಅನುಭವಾತ್ಮಕ ಕಲಿಕೆಗೆ ಅವಕಾಶ ಕಲ್ಪಿಸುವ ಕ್ರಮ ಎಲ್ಲ ಶಾಲೆಗಳಲ್ಲಿ ನಡೆಯುತ್ತದೆ.

ಕೆಲವು ಶಾಲೆಗಳಲ್ಲಿ ಇದನ್ನು ಗಣತಂತ್ರ ವ್ಯವಸ್ಥೆಯ ಪ್ರಾಥಮಿಕ ಅರಿವು ಮೂಡಿಸುವ ಪ್ರಾಯೋಗಿಕ ಪಾಠವಾಗಿಯೂ ಬಳಸಲಾಗುತ್ತದೆ. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರದ ’ಚುನಾವಣೆ’ ವಿದ್ಯಾರ್ಥಿಗಳಿಗೆ ಅಂತಹ ವ್ಯವಸ್ಥೆಯ ಮೊದಲ ಪಾಠ ಕಲಿಸಿತು.  ವಾರಾವಧಿಯ ಚುನಾವಣಾ ವೇಳಾಪಟ್ಟಿಯಲ್ಲಿ ಅಧಿಸೂಚನೆ ಪ್ರಕಟಣೆ, ನಾಮಪತ್ರ ಸಲ್ಲಿP, ನಾಮಪತ್ರ ಪರಿಶೀಲನೆ, ಹಿಂತೆಗೆತ, ಪ್ರಚಾರಕ್ಕೆ ಅವಕಾಶ ನೀಡಲಾಗಿತ್ತು.

ನಾಯಕ, ಉಪನಾಯಕ ಚುನಾವಣೆಗೆ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಚಿಹ್ನೆಗಳನ್ನೊಳಗೊಂಡ ಎರಡು ಪ್ರತ್ಯೇಕ ಬಣ್ಣಗಳ ಮುದ್ರಿತ ಮತಪತ್ರ ಬಳಸಲಾಗಿತ್ತು. ಶುಕ್ರವಾರ ನಡೆದ ಚುನಾವಣೆಯಲ್ಲಿ ಭಾಗವಹಿಸುವ ’ಮತದಾರ’ರ ಸಹಿಪಡೆದು ಮತಪತ್ರ ನೀಡುವ, ಬೆರಳಿಗೆ ಅಳಿಸಲಾಗದ ಶಾಯಿ ಹಾಕುವ, ಮತದಾನದ ವಿಭಾಗದಲ್ಲಿ ಗುಪ್ತವಾಗಿ ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನೆದುರು ಗುರುತು ಮಾಡಿ, ಮತಪತ್ರವನ್ನು ಕ್ರಮದಂತೆ ಮಡಚಿ, ಮತಪೆಟ್ಟಿಗೆಗೆ ಹಾಕುವ ವ್ಯವಸ್ಥೆ ಇತ್ತು. ಅಂದು ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗಗಳ ಒಟ್ಟು ೨೨೧ ಮತದಾರರು ತಮ್ಮ ವಿಭಾಗದ ನಾಯಕ ಮತ್ತು ಉಪನಾಯಕನ ಆಯ್ಕೆಗೆ ಹಕ್ಕು ಚಲಾಯಿಸಿದರು.

ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆದ ಮತ ಎಣಿಕೆಯಲ್ಲಿ ಪ್ರೌಢ ಶಾಲಾ ವಿಭಾಗದ ನಾಯಕಿಯಾಗಿ ೧೦ನೆ ತರಗತಿಯ ಅನುಶ್ರೀ ದೇವಾಡಿಗ, ಉಪನಾಯಕಿಯಾಗಿ ೮ನೆ ತರಗತಿಯ ಆಶ್ರಿತಾ ಕೆ. ಪ್ರಾಥಮಿಕ ವಿಭಾಗದಲ್ಲಿ ವೀಕ್ಷಿತಾ ನಾಯಕಿಯಾಗಿ, ಉಪನಾಯಕನಾಗಿ ವೀರೇಶ ಆಯ್ಕೆಯಾದರು.

ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ ಶೇರುಗಾರ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಶಾಂತಿ ಡಿಕೋಸ್ಟ, ಸಹಶಿಕ್ಷಕರಾದ ಸುಜಾತಾ ದೇವಾಡಿಗ, ಶೈಲಜಾ, ಸುಪ್ರೀತಾ, ಪರಿಮಳಾ, ದಿವ್ಯಶ್ರೀ ಎನ್, ದೈಹಿಕ ಶಿಕ್ಷಣ ಶಿಕ್ಷಕರಾದ ರೇಷ್ಮಾ ಮೆಂಡೊನ್ಸಾ, ಸಂತೋಷ ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.

 ಶಾಲಾ ವಿದ್ಯಾರ್ಥಿ ಸರ್ಕಾರದ ಚಟುವಟಿಕೆಗಳು ವಿದ್ಯಾರ್ಥಿಗಳ ಕಲಿಕೆಗೆ, ಅವರಲ್ಲಿ ಹೊಣೆಗಾರಿಕೆಯ ಅರಿವು ಮೂಡಿಸುವುದಕ್ಕೆ ಸಹಕಾರಿಯಾಗುವುದರಿಂದ ಅವುಗಳನ್ನು ಅಂತಹ ಕಾಳಜಿಯಿಂದ ನಡೆಸಲಾಗುತ್ತದೆ
 - ರಾಘವೇಂದ್ರ ಶೇರುಗಾರ್, ಮುಖ್ಯೋಪಾಧ್ಯಾಯ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !