ಮಂಗಳವಾರ, ಸೆಪ್ಟೆಂಬರ್ 21, 2021
21 °C

ಸರಳ ಸಂಭ್ರಮದ ಗಣೇಶ ಹಬ್ಬಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕೋವಿಡ್‌–19 ಕಠಿಣ ನಿರ್ಬಂಧಗಳ ನಡುವೆಯೂ ಜಿಲ್ಲೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ವ್ಯಾಪಾರ ಜೋರಾಗಿದೆ. ಹಬ್ಬದ ವಿಶೇಷವಾಗಿ ಸಾರ್ವಜನಿಕರು ಕಬ್ಬು ಖರೀದಿಸುತ್ತಿದ್ದ ದೃಶ್ಯ ಗುರುವಾರ ಹಲವೆಡೆ ಕಂಡುಬಂತು.

ಹಲವು ಸಂಘ–ಸಂಸ್ಥೆಗಳು ಸಾರ್ವಜನಿಕವಾಗಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ವೇದಿಕೆ ಸಜ್ಜುಗೊಳಿಸಿವೆ. ಮಂಟಪವನ್ನು ಬಣ್ಣಗಳಿಂದ ಅಲಂಕೃತಗೊಳಿಸಲಾಗಿದೆ. ಈ ಬಾರಿ ದೊಡ್ಡ ಗಾತ್ರದ ಬದಲಾಗಿ ಸಣ್ಣ ಗಣೇಶನ ಮೂರ್ತಿ ಪ್ರತಿಷ್ಠಾಪನೆಗೆ ಸಾರ್ವಜನಿಕರು ಹೆಚ್ಚು ಒಲವು ತೋರುತ್ತಿರುವುದು ಕಂಡುಬಂತು.

ಗಡ್ಡೆಅಂಗಡಿ ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ 37ನೇ ವರ್ಷದ ಗಣೇಶೋತ್ಸವ ಸೆ.10ರಿಂದ 13ರವರೆಗೆ ನಡೆಯಲಿದ್ದು, ಅಲೆವೂರು ಗಣೇಶ ಗುಡಿಯಲ್ಲಿ ಧಾರ್ಮಿಕ ಕಾರ್ಯಕ್ರಮಳನ್ನು ಆಯೋಜಿಸಲಾಗಿದೆ. ಸೆ.10ರಂದು ₹ 10 ಲಕ್ಷ ಮೌಲ್ಯದ ನಿತ್ಯಪೂಜಿತ ಗಣಪನಿಗೆ ಸ್ವರ್ಣಕವಚ ಸಮರ್ಪಣೆ ನಡೆಯಲಿದೆ. ಪ್ರತಿ ದಿನ ಮಧ್ಯಾಹ್ನ 1ಕ್ಕೆ ಭಜನೆ ಹಾಗೂ ರಾತ್ರಿ 7ಕ್ಕೆ ಮಹಾಪೂಜೆ ನಡೆಯಲಿದೆ.

ಕಿದಿಯೂರು ಭಂಡಾರ್‌ಕರ್ ಫ್ಯಾಮಿಲಿ ಟ್ರಸ್ಟ್‌ನಿಂದ ಗುರುವಾರ ಸಾಮೂಹಿಕ ಗೌರಿ ಪೂಜೆ ಕಿದಿಯೂರಿನಲ್ಲಿ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.