ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿವರ್ಷ 2,000 ವೈದ್ಯರ ನೇಮಕ

ಆಮ್ಲಜನಕ ಘಟಕ ಉದ್ಘಾಟಿಸಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌
Last Updated 15 ಜುಲೈ 2021, 5:46 IST
ಅಕ್ಷರ ಗಾತ್ರ

ಹೆಬ್ರಿ: ರಾಜ್ಯದ ನೂತನ 45 ತಾಲ್ಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆರಿಸಲು ಬೇಡಿಕೆಯಿದೆ. ಸರ್ಕಾರ ಈ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಪ್ರಕ್ರಿಯೆ ಆರಂಭಿಸುವಾಗ ಹೆಬ್ರಿಗೆ ಆದ್ಯತೆ ನೀಡಲಾಗುತ್ತದೆ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಬುಧವಾರ ಹೆಬ್ರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳೂರು ಕೆಮಿಕಲ್ಸ್ ಆಂಡ್ ಪರ್ಟಿಲೈಸರ್ಸ್ ಲಿಮಿಟೆಡ್ ಕೊಡುಗೆ ಯಾಗಿ ನೀಡಿದ ಆಮ್ಲಜನಕ ಉತ್ಪಾದನಾ ಘಟಕ ಉದ್ಘಾಟಸಿ ಮಾತನಾಡಿದರು.

30 ವರ್ಷಗಳಿಂದ ಮಾಡಲು ಸಾಧ್ಯ ವಾಗದ ಐತಿಹಾಸಿಕ ನಿರ್ಧಾರವನ್ನು ನಮ್ಮ ಸರ್ಕಾರ ಮಾಡಿದೆ. ಈಗಾಗಲೇ 4000 ಸಾವಿರ ವೈದ್ಯರ ನೇಮಕ ಮಾಡಲಾಗಿದೆ. ಇನ್ನು ಮುಂದೆ ಪ್ರತಿವರ್ಷ ರಾಜ್ಯದಲ್ಲಿ 2,000 ವೈದ್ಯರ ನೇಮಕ ಮಾಡಲಾಗುವುದು ಸಚಿವ ಡಾ. ಕೆ ಸುಧಾಕರ್ ಹೇಳಿದರು.

ರಾಜ್ಯದಲ್ಲಿ 186 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಳವಡಿ ಸಲಾಗಿದೆ. ರಾಜ್ಯದಲ್ಲಿ 186 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಹೊಸದಾಗಿ ಸರ್ಕಾರ ಮತ್ತು ವಿವಿಧ ಕಂಪನಿಗಳ ಸಹಕಾರದಲ್ಲಿ ಆರಂಭಿಸಲಾಗುವುದು.
ಜನರು ಸರ್ಕಾರದ ನೀತಿಯನ್ನು ಕಡ್ಡಾಯವಾಗಿ ಪಾಲಿಸುವುದರ ಮೂಲಕ ಕೋವಿಡ್‌ಅನ್ನು ಓಡಿಸಬೇಕು. ನಮಗೆ ನಾವೇ ನಿರ್ಬಂಧ ಹಾಕಿಕೊಂಡು ಮದುವೆ ಸೇರಿದಂತೆ ಜನಸಂದಣಿ ಸೇರುವ ಕಡೆಗಳಲ್ಲಿ ಭಾಗವಹಿಸದಂತೆ ಕಡಿವಾಣ ಹಾಕಿಕೊಳ್ಳಬೇಕು ಎಂದರು.

ಉಡುಪಿ ಜನರನ್ನು ಶ್ಲಾಘಿಸಿದ ಸಚಿವರು, ರಾಜ್ಯದಲ್ಲಿ 2.60 ಕೋಟಿ ಲಸಿಕೆ ವಿತರಿಸಲಾಗಿದೆ. ಲಸಿಕ ವಿತರಣೆಯಲ್ಲಿ ಉಡುಪಿ ಜಿಲ್ಲೆ ಜನಸಂಖ್ಯೆ ಆಧಾರದ ಮೇಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಶೇ 45 ರಷ್ಟು ಮಂದಿ ಒಂದು ಡೋಸ್ ಲಸಿಕೆ ಪಡೆದಿರುವುದು ಹೆಮ್ಮೆಯ ಸಂಗತಿ. ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು ಎಂದರು.

ಕಾರ್ಕಳ ತಾಲ್ಲೂಕಿನ ಅಜೆಕಾರು ಮತ್ತು ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಶೀಘ್ರದಲ್ಲೆ ಮೇಲ್ದರ್ಜೆಗೇರಿಸಲಾಗುವುದು. ಕೋವಿಡ್ ನಿಯಂತ್ರಣದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯಾಧಿಕಾ ರಿಗಳು, ಆರೋಗ್ಯ ಸಹಾಯಕರು, ಕೋವಿಡ್‌ ವಾರಿಯರ್ಸ್‌ ಶ್ರಮ ಮತ್ತು ನಿಸ್ವಾರ್ಥ ಸೇವೆಗೆ ಬೆಲೆ ಕಟ್ಟಲಾಗದು. ಈ ಕಾರಣದಿಂದಾಗಿ ಜನರಿಗೆ ಸರ್ಕಾರಿ ಆಸ್ಪತ್ರೆಗಳ ಮೇಲೆ ನಂಬಿಕೆ ಬಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಹೆಬ್ರಿ ತಾಲ್ಲೂಕು ಅಲ್ಪಾವಧಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಹೆಜ್ಜೆ ಇಟ್ಟಿದೆ. ಈ ಸಾಧನೆಗೆ ಕಾರಣರಾದ ಎಂಸಿಎಫ್ ಮತ್ತು ಹೆಬ್ರಿಯ ದಾನಿಗಳ ಸೇವೆ ಸ್ಮರಿಸಿದರು.

ಆಸ್ಪತ್ರೆಗೆ ಕೊಡುಗೆ ನೀಡಿದ ಎಂಸಿಎಫ್ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ್ ರಾವ್,ಗೇರು ಉದ್ಯಮ ಸಮೂಹಗಳ ಪರವಾಗಿ ಮುನಿಯಾಲು ದಿನೇಶ ಪೈ, ವರಂಗದ ಕೆಇಎಲ್‌ ಮತ್ತು ಮಂಗಳೂರಿನ ಕ್ಯಾಂಪ್ಕೋ ಸಂಸ್ಥೆಯ ಮುಖ್ಯಸ್ಥ ರನ್ನು ಸನ್ಮಾನಿಸಲಾಯಿತು.

ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ತಾಲ್ಲೂಕು ಆರೋಗ್ಯಾಧಿಕಾರಿ ಕೃಷ್ಣಾನಂದ ಶೆಟ್ಟಿ, ಹೆಬ್ರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ್, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ, ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT