ಶನಿವಾರ, ಜನವರಿ 28, 2023
20 °C

ಬಾಲ್ಯದ ಅನುಭವ ಭವಿಷ್ಯತ್ತಿಗೆ ಆಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರ್ಕಳ: ಬಾಲ್ಯದಲ್ಲಿ ನಾವು ಪಡೆಯುವ ಅನುಭವಗಳೇ ಭವಿಷ್ಯತ್ತಿಗೆ ಆಧಾರವಾಗುತ್ತವೆ ಎಂದು ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ಶೆಣೈ ಹೇಳಿದರು.

ತಾಲ್ಲೂಕಿನ ಶಿರ್ಲಾಲು ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಇಂಟರಾಕ್ಟ್‌ ಕ್ಲಬ್‌ನ ಪದಗ್ರಹಣ ನೆರವೇರಿಸಿ ಮಾತನಾಡಿದ ಅವರು ವಿದ್ಯಾರ್ಥಿ ಜೀವನದಲ್ಲಿ ಗಳಿಸಿದ ಶಿಕ್ಷಣ, ಶಿಸ್ತು, ನಾಯಕತ್ವಗಳು ಭವಿಷ್ಯಕ್ಕೆ ಆಧಾರವಾಗುತ್ತವೆ ಎಂದರು.

ಇಂಟರಾಕ್ಟ್ ಕ್ಲಬ್‌ನ ತಾಲ್ಲೂಕು ಚೇರ್‍ಮನ್ ಶಶಿಕಲಾ ಹೆಗ್ಡೆ, ಕಾರ್ಕಳ ರೋಟರಿ ಕ್ಲಬ್‌ನ ಸದಸ್ಯ ರೇಖಾ ಉಪಾಧ್ಯಾಯ, ಚೆರಿಯನ್, ಅರುಣಾ ಎಂ ಶೆಣೈ, ವಸಂತ್ ಎಂ ಇದ್ದರು.

ಇಂಟರಾಕ್ಟ್ ಕ್ಲಬ್‌ನ ಅಧ್ಯಕ್ಷರಾಗಿ ರಕ್ಷಿತ್ ನಾಯಕ್, ಕಾರ್ಯದರ್ಶಿಯಾಗಿ ವಿನಯ್, ದಂಡಪಾಣಿಯಾಗಿ ಸಮರ್ಥ್, ಸದಸ್ಯರಾಗಿ ಅಮೂಲ್ಯ, ಪ್ರಕೃತಿ, ವಿನಮ್ರ, ಪವಿತ್ರ ಆಯ್ಕೆಯಾದರು. ಕಾಲೇಜಿನ ಪ್ರಾಂಶುಪಾಲ ಬೇಬಿ ಕೆ ಈಶ್ವರಮಂಗಲ ಸ್ವಾಗತಿಸಿದರು. ಸತೀಶ್ ವಂದಿಸಿದರು. ಮಾರ್ಗದರ್ಶಿ ಶಿಕ್ಷಕ ನಾರಾಯಣ ಪೂಜಾರಿ ಎನ್ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.