ಉಡುಪಿ ನಗರಸಭೆ, ಕಾರ್ಕಳ ಪುರಸಭೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

7
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೆಚ್ಚಿನ ಸ್ಥಾನ: ಯೋಗೀಶ್‌ ಶೆಟ್ಟಿ ವಿಶ್ವಾಸ

ಉಡುಪಿ ನಗರಸಭೆ, ಕಾರ್ಕಳ ಪುರಸಭೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Published:
Updated:
Deccan Herald

ಉಡುಪಿ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಸ್ಪರ್ಧಿಸಲಿದ್ದು, ಉಡುಪಿ ನಗರಸಭೆ ಹಾಗೂ ಕಾರ್ಕಳ ಪುರಸಭೆಗೆ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ನಗರಸಭೆಯ ಮೂಡಬೆಟ್ಟು ವಾರ್ಡ್‌ನಿಂದ ರಮೇಶ್‌ ಶೆಟ್ಟಿ, ಶಿರಿಬೀಡಿನಿಂದ ಕೆ.ರಮೇಶ್‌ಶೆಟ್ಟಿ, ಕರಂಬಳ್ಳಿಯಿಂದ ರೋಹಿತ್, ಅಜ್ಜರಕಾಡಿನಿಂದ ಅನಿತ ಶೆಟ್ಟಿ, ಕಸ್ತೂರ ಬಾ ವಾರ್ಡ್‌ನಿಂದ ಚಂದ್ರಕಲಾ, ಇಂದಿರಾ ನಗರದಿಂದ ಜಯಕರ ಪೂಜಾರಿ, ವಡಮುಂಡೇಶ್ವರದಿಂದ ಶಶಿಧರ್ ಎಂ.ಅಮೀನ್‌, ಗುಂಡಿಬೈಲಿನಿಂದ ಅರೀಫ್‌ ಸ್ಪರ್ಧಿಸಲಿದ್ದಾರೆ ಎಂದರು.

ಕಾರ್ಕಳ ಪುರಸಭೆಯ ಬಂಗ್ಲೆಗುಡ್ಡೆ–ಕಜೆಯಿಂದ ನಾಸೀರ್ ಹುಸೇನ್‌, ಸಾಲ್ಮರ–ಜರಿಗುಡ್ಡೆ ಕ್ಷೇತ್ರದಿಂದ ಉಮೇಶ್‌, ದಾನಾ ಶಾಲೆಯಿಂದ ಕೆ.ಪಿ.ಶಿವಾನಂದ, ಕಾಬೆಟ್ಟು ತಾಲ್ಲೂಕು ಕಚೇರಿ ಕ್ಷೇತ್ರದಿಂದ ಮಹಮ್ಮದ್ ಜುಬೇರ್, ಕಾಬೆಟ್ಟು ರೋಟರಿಯಿಂದ ಸಚಿನ್ ದೇವಾಡಿಗ ಅವರಿಗೆ ಸ್ಪರ್ಧಿಸಲು ಟಿಕೆಟ್‌ ನೀಡಲಾಗಿದೆ ಎಂದು ತಿಳಿಸಿದರು.

ಇನ್ನೆರಡು ದಿನಗಳಲ್ಲಿ ಕುಂದಾಪುರ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯ್ತಿ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಈ ಬಾರಿ ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಡುಪಿ ನಗರಸಭೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ. ಮಣಿಪಾಲ, ಸಂತೆಕಟ್ಟೆ ಭಾಗದಲ್ಲಿ ಒಳಚರಂಡಿ ಸೌಲಭ್ಯ ಕಲ್ಪಿಸಿಲ್ಲ. ನಗರದಲ್ಲಿ ಬೀದಿದೀಪಗಳ ಸಮಸ್ಯೆ ಹೆಚ್ಚಾಗಿದ್ದರೂ ಸ್ಪಂದಿಸುತ್ತಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದರೆ, ಉಚಿತವಾಗಿ ಕಸ ವಿಲೇವಾರಿ, ತೆರಿಗೆ ದರ ಇಳಿಕೆ ಹಾಗೂ ತ್ವರಿತಗತಿಯಲ್ಲಿ ಕಟ್ಟಡ ನಿರ್ಮಾಣ ಪರವಾನಗಿ ನೀಡಲು ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರವಿರಾಜ್, ಸಚಿನ್‌, ಪ್ರಕಾಶ್‌ ಶೆಟ್ಟಿ, ಪ್ರದೀಪ್‌ ಅವರೂ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !