ಮಂಗಳವಾರ, ನವೆಂಬರ್ 24, 2020
26 °C

‘ಕಡಲತಡಿಯಿಂದ ಹಿಮಗಿರಿಯ ತನಕ’ ಪುಸ್ತಕ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸುಭದ್ರಾ ಮಾತಾಜಿ ಕುರಿತ ಆತ್ಮಕತೆಯ ಕನ್ನಡ ಅವತರಣಿಕೆ ‘ಕಡಲತಡಿಯಿಂದ ಹಿಮಗಿರಿಯ ತನಕ’ ಪುಸ್ತಕವನ್ನು ಭಾನುವಾರ ಹರಿದ್ವಾರದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪತಂಜಲಿ ಸಂಸ್ಥೆಯ ಆಚಾರ್ಯ ಬಾಲಕೃಷ್ಣ ಬಿಡುಗಡೆ ಮಾಡಿದರು.

ಅಧ್ಯಾತ್ಮದ ಸೆಳೆತದಿಂದ ಉಡುಪಿಯಲ್ಲಿ ವಿಶ್ವೇಶ ತೀರ್ಥ ಶ್ರೀಗಳಿಂದ ಮಂತ್ರದೀಕ್ಷೆ ಪಡೆದು ಹಿಮಾಲಯದಲ್ಲಿ ಒಂಬತ್ತು ವರ್ಷ ಅಧ್ಯಾತ್ಮ ಸಾಧನೆ ಮಾಡಿರುವ ಸುಭದ್ರಾ ಮಾತಾಜಿ, ಹರಿದ್ವಾರದಲ್ಲಿ ಆಶ್ರಮ ಸ್ಥಾಪಿಸಿ ಸಾಧು ಸಂತರು ಯಾತ್ರಿಗಳಿಗೆ ಊಟ, ವಸತಿ, ಆರೋಗ್ಯ ಸೇವೆ ನೀಡಿದ್ದಾರೆ.

ಸಧ್ಯ ಅನಾರೋಗ್ಯದಿಂದ ಹರಿದ್ವಾರದ ರಾಮಕೃಷ್ಣಾಶ್ರಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾತಾಜಿ ಕುರಿತು ಹಿಂದಿಯಲ್ಲಿ ರಚಿತವಾಗಿರುವ ಕೃತಿಯನ್ನು ಚಿಂತಕ ಡಾ.ಜಿ.ಭಾಸ್ಕರ ಮಯ್ಯ ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ರಾಮಕೃಷ್ಣ ಆಶ್ರಮ ಆಸ್ಪತ್ರೆಯ ಮುಖ್ಯಸ್ಥ ಡಾ.ಧಿಯಾಧಿಪಾನಂದ, ತಪೋವನಿ ಸುಭದ್ರಾ ಮಾತಾ ಧರ್ಮಾರ್ಥ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಬಹದ್ದೂರ್ ಸಿಂಗ್ ವರ್ಮಾ, ಪೇಜಾವರ ಶ್ರೀಗಳ ಆಪ್ತಕಾರ್ಯದರ್ಶಿ ವಿಷ್ಣು ಆಚಾರ್ಯ, ಜಿ.ಎ.ಅನಂತ, ಕೃಷ್ಣ ಭಟ್, ಹರಿದ್ವಾರ ಪೇಜಾವರ ಶಾಖಾ ಮಠದ ವ್ಯವಸ್ಥಾಪಕ ಮನೋಜ್, ಅನೂಪ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಈ ಸಂದರ್ಭ ಉಪಸ್ಥಿತರಿದ್ದರು.

ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ಸಂಯೋಜಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.