ಗುರುವಾರ , ನವೆಂಬರ್ 14, 2019
18 °C

ಕೋಟಗೆ ತಪ್ಪಿದ ಉಡುಪಿ ಉಸ್ತುವಾರಿ: ಬಿಲ್ಲವರ ಸಭೆ

Published:
Updated:
Prajavani

ಶಿರ್ವ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ ಜಿಲ್ಲೆಯ ಉಸ್ತುವಾರಿ ತಪ್ಪಿದ ಕುರಿತು ಚರ್ಚಿಸಲು ಬಿಲ್ಲವ ಸಂಘಟನೆಗಳ ಪ್ರತಿನಿಧಿಗಳ ಮತ್ತು ಬಿಲ್ಲವ ಮುಖಂಡರ ತುರ್ತು ಸಭೆಯನ್ನು ಇದೇ 17ರ ಬೆಳಿಗ್ಗೆ 9.30ಕ್ಕೆ ಕಟಪಾಡಿ ವಿಶ್ವನಾಥ ಕ್ಷೇತ್ರದಲ್ಲಿ ಕರೆಯಲಾಗಿದೆ.

ಇದರೊಂದಿಗೆ, ಸರ್ಕಾರದ ವತಿಯಿಂದ ಇತ್ತೀಚೆಗೆ ಕಟಪಾಡಿಯಲ್ಲಿ ನಡೆದ ನಾರಾಯಣಗುರು ಜಯಂತಿಯಲ್ಲಿ ವಿವಿಧ ಜನಪ್ರತಿನಿಧಿಗಳು ಭಾಗವಹಿಸದೇ ಇರುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ಕುರಿತು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)