ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಯುವ ವೈದ್ಯರ ಮಾದರಿ ಸೇವೆ

ರೋಗಿಗಳಲ್ಲಿ ಭರವಸೆ ಬೆಳಕು
Last Updated 19 ಮೇ 2021, 19:30 IST
ಅಕ್ಷರ ಗಾತ್ರ

ಕುಂದಾಪುರ: ಇಲ್ಲಿನ ಸರ್ಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ವರು ಯುವ ವೈದ್ಯರ ತಂಡ, ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬಿ, ಭರವಸೆ ಬೆಳಕು ಮೂಡಿಸುತ್ತಿದೆ.

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ನೀಗಿಸಲು, ಕೋವಿಡ್ ರೋಗಿಗಳ ಚಿಕಿತ್ಸೆಗೆ ತಾತ್ಕಾಲಿಕ ನೆಲೆಯಲ್ಲಿ ವೈದ್ಯರನ್ನು ಆಹ್ವಾನಿಸಿದಾಗ ಬಂದು ಸೇರಿದವರು ಡಾ. ಆಶಿತ್, ಡಾ. ರಜತ್, ಡಾ. ರಚನಾ ಹಾಗೂ ಡಾ. ನಿವೇದಿತಾ.

ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲವರು ಹಿಂದೇಟು ಹಾಕುವಾಗ, ಈ ಉತ್ಸಾಹಿಗಳು ತಾವಾಗಿಯೇ ಮುಂದೆ ಬಂದಿದ್ದಾರೆ.

ಡಾ. ಆಶಿತ್ ಮತ್ತು ರಜತ್ ಸಹೋದರರು, ಮುಂಬೈಯಲ್ಲಿ ದೊಡ್ಡ ಉದ್ಯಮಿಯಾಗಿರುವ ಬಡಾಬೈಲ್ ರತ್ನಾಕರ ಶೆಟ್ಟಿ ಅವರ ಮಕ್ಕಳು. ಡಾ. ರಚನಾ, ಇತ್ತೀಚೆಗಷ್ಟೆ ನಿಧನರಾಗಿರುವ ಮುಂಬೈಯಲ್ಲಿ ದೊಡ್ಡ ಹೋಟೆಲ್ ಉದ್ಯಮಿಯಾಗಿದ್ದ ಮರಾಠ ಸುರೇಶ್ ಶೆಟ್ಟಿ ಅವರ ಮಗಳು. ಡಾ. ನಿವೇದಿತಾ ಕುಂದಾಪುರದ ಹವಾಲ್ದಾರ್ ಕುಟುಂಬದವರು. ಆರ್ಥಿಕ ಅಗತ್ಯ ಅವರನ್ನು ಇಲ್ಲಿಗೆ ಕರೆತಂದಿದ್ದಲ್ಲ, ಬದಲಾಗಿ ಅವರ ಸೇವಾ ಮನೋಭಾವ ಈ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿದೆ.

ಲಾಕ್‌ಡೌನ್ ಕಾರಣಕ್ಕೆ ಮುಂಬೈನಿಂದ ಊರಿಗೆ ಬಂದಿದ್ದ ಡಾ. ರಚನಾ ಅವರು, ಆಶಿತ್ ಮತ್ತು ರಜತ್ ಅವರಿಂದ ಪ್ರೇರಿತರಾಗಿ, ಕೋವಿಡ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಎಲ್ಲ ವೈದ್ಯರು ಕುಂದಾಪುರ ಕನ್ನಡದಲ್ಲಿ ರೋಗಿಗಳೊಂದಿಗೆ ಸಂವಹನ ಮಾಡುವ ಮೂಲಕ ಅವರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

***

ಸಮಾಜಮಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿ ಇದ್ದ ತಂದೆಯವರ ಸೇವಾ ಕಾರ್ಯ ನನಗೆ ಪ್ರೇರಣೆ. ಅಮ್ಮ ಹಾಗೂ ಮನೆಯವರ ಪ್ರೋತ್ಸಾಹ ಕೆಲಸದ ಉತ್ಸಾಹವನ್ನು ಹೆಚ್ಚಿಸುತ್ತಿದೆ.

ಕೋವಿಡ್‌: ಕುಂದಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಯುವ ವೈದ್ಯರ ಮಾದರಿ ಸೇವೆ

– ಡಾ. ರಚನಾ, ವೈದ್ಯೆ

ನಮ್ಮ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಾಲ್ವರು ವೈದ್ಯರಲ್ಲಿ ಸೇವಾ ಬದ್ಧತೆ ಇದೆ. ಸೋಂಕಿತರನ್ನು ಗುಣಪಡಿಸುವಲ್ಲಿ ಅವರ ಶ್ರಮ ಅವಿರತ.

– ಡಾ. ನಾಗೇಶ್, ನೋಡೆಲ್ ವೈದ್ಯಾಧಿಕಾರಿ ಕೋವಿಡ್ ಆಸ್ಪತ್ರೆ ಕುಂದಾಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT