ಉಡುಪಿ: ಮಲ್ಪೆ ಬೀಚ್‌ನಲ್ಲಿ ಅಳವಡಿಸಲಾಗಿದ್ದ ತೇಲುವ ಸೇತುವೆಯನ್ನು ನಿರ್ವಹಣಾ ಕೆಲಸ ಹಾಗೂ ಭಾರಿ ಮಳೆ ಗಾಳಿಯ ಮುನ್ಸೂಚನೆಯ ಕಾರಣದಿಂದ ತಾತ್ಕಾಲಿಕವಾಗಿ ತೆರವುಗೊಳಿಸಲಾಗಿದೆ ಎಂದು ಮಂತ್ರ ಟೂರಿಸಂ ಸಂಸ್ಥೆ ತಿಳಿಸಿದೆ.
ಸಮುದ್ರದ ನೀರಿನಲ್ಲಿ ತೇಲುವಾಗ ಪ್ಲಾಸ್ಟಿಕ್ ಬಾಕ್ಸ್‌ಗಳ ಕೆಳಗಿನ ಭಾಗದಲ್ಲಿ ಚಿಪ್ಪುಗಳು ಜಮೆಯಾಗಿರುತ್ತವೆ. ಅವುಗಳನ್ನು ತೆಗೆಯಲು ಸೇತುವೆಯನ್ನು ತೆರವು ಮಾಡಲಾಗಿದೆ. ಆದರೆ ಕೆಲವರು ಮತ್ತೆ ತೇಲುವ ಸೇತುವೆ ಮುರಿದುಹೋಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.