ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿ: ನಾಲ್ಕೂರು ಪಂಚಾಯಿತಿ ಪ್ರಥಮ

26,000ಕ್ಕೂ ಅಧಿಕ ಮಾನವ ದಿನಗಳನ್ನು ಸೃಜಿಸಿ ಸಾಧನೆ
Last Updated 20 ಮಾರ್ಚ್ 2023, 16:11 IST
ಅಕ್ಷರ ಗಾತ್ರ

ಉಡುಪಿ: ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಜತೆಗೆ ಗ್ರಾಮೀಣ ಜನರ ಆರ್ಥಿಕ ಸಬಲೀಕರಣಕ್ಕೆ ಕಾರಣವಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು ಬ್ರಹ್ಮಾವರ ತಾಲ್ಲೂಕಿನ ನಾಲ್ಕೂರು ಗ್ರಾಮ ಪಂಚಾಯಿತಿ 2022-23ನೇ ಸಾಲಿನಲ್ಲಿ ಉತ್ತಮ ಸಾಧನೆ ತೋರಿದೆ.

ನಾಲ್ಕೂರು ಗ್ರಾಮ ಪಂಚಾಯಿತಿಯು ಉದ್ಯೋಗ ಖಾತ್ರಿ ಯೋಜನೆಯಡಿ ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸುವ ಮೂಲಕ ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಪ್ರಥಮ ಸ್ಥಾನದಲ್ಲಿದೆ. 26,000ಕ್ಕೂ ಅಧಿಕ ಮಾನವ ದಿನಗಳನ್ನು ಸೃಜಿಸುವ ಮೂಲಕ ಬ್ರಹ್ಮಾವರ ತಾಲ್ಲೂಕಿನಲ್ಲಿ ಉತ್ತಮ ಮಾನವ ದಿನಗಳನ್ನು ಸೃಜಿಸಿದ ಪಂಚಾಯಿತಿಗಳ ಪೈಕಿ ಮೊದಲ ಸ್ಥಾನದಲ್ಲಿದೆ.

2021-22ನೇ ಸಾಲಿನಲ್ಲೂ ನಾಲ್ಕೂರು ಗ್ರಾಮ ಪಂಚಾಯಿತಿ 23,930 ಮಾನವ ದಿನಗಳ ಸೃಜನೆ ಮಾಡುವ ಮೂಲಕ ಬ್ರಹ್ಮಾವರ ತಾಲೂಕಿನಲ್ಲಿ ಮೊದಲ ಸ್ಥಾನದಲ್ಲಿತ್ತು. ಈ ಬಾರಿ ಈಗಾಗಲೇ 26,608 ಮಾನವ ದಿನಗಳನ್ನು ಸೃಜಿಸಿ ದಾಖಲೆ ಬಡೆದಿದೆ.

ಬ್ರಹ್ಮಾವರ ತಾಲ್ಲೂಕಿನಲ್ಲಿ ಕಾಡೂರು ಗ್ರಾಮ ಪಂಚಾಯಿತಿ ದ್ವಿತೀಯ ಸ್ಥಾನದಲ್ಲಿದ್ದರೆ, ಆವರ್ಸೆ ಗ್ರಾಮ ಪಂಚಾಯಿತಿ ಉತ್ತಮ ಮಾನವ ದಿನಗಳ ಸೃಜನೆಯೊಂದಿಗೆ ತೃತೀಯ ಸ್ಥಾನದಲ್ಲಿದೆ.

ಈ ಬಾರಿ ಪಂಚಾಯಿತಿಯಲ್ಲಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಡಿ ಕೃಷಿ ಬಾವಿ, ಗೊಬ್ಬರ ಗುಂಡಿ, ದನದ ಹಟ್ಟಿ, ಬಚ್ಚಲುಗುಂಡಿ, ಕೋಳಿಗೂಡು ಇನ್ನಿತರ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಸಮುದಾಯ ಕಾಮಗಾರಿಗಳಡಿ ಕೆರೆ ಹೂಳೆತ್ತುವುದು, ತೋಡು ಹೂಳೆತ್ತುವುದು, ಸಿಮೆಂಟ್‌ ರಸ್ತೆ ಸೇರಿದಂತೆ ಹಲವು ಕಾಮಗಾರಿಗಳು ನಡೆದಿದೆ.

ಉಡುಪಿಯಲ್ಲಿ ಯಾರು ಪ್ರಥಮ:

ಉಡುಪಿ ತಾಲ್ಲೂಕಿನಲ್ಲಿ ಕುಕ್ಕೆಹಳ್ಳಿ ಗ್ರಾಮ ಪಂಚಾಯಿತಿ 7,300ಕ್ಕೂ ಅಧಿಕ ಮಾನವ ದಿನಗಳನ್ನು ಸೃಜಿಸಿ ಪ್ರಥಮ ಸ್ಥಾನದಲ್ಲಿದ್ದರೆ, ತೆಂಕನಿಡಿಯೂರು ಗ್ರಾಮ ಪಂಚಾಯಿತಿ 7,000ಕ್ಕೂ ಹೆಚ್ಚು ಮಾನವ ದಿನಗಳನ್ನು ಸೃಜಿಸಿ ದ್ವಿತೀಯ ಸ್ಥಾನದಲ್ಲಿದೆ. ಬಹುತೇಕ ನಗರ ಪ್ರದೇಶಗಳನ್ನು ಒಳಗೊಂಡಿರುವ 80 ಬಡಗಬೆಟ್ಟು ಗ್ರಾಮ ಪಂಚಾಯಿತಿ ಕೂಡ ಉತ್ತಮ ಸಾಧನೆ ತೋರಿದ್ದು 6,600ಕ್ಕೂ ಹೆಚ್ಚು ಮಾನವದಿನಗಳನ್ನು ಸೃಜಿಸಿ ಉಡುಪಿ ತಾಲ್ಲೂಕಿನಲ್ಲಿ ಮೂರನೇ ಸ್ಥಾನದಲ್ಲಿದೆ.

ಕುಕ್ಕೆಹಳ್ಳಿ ಹಾಗೂ ತೆಂಕನಿಡಿಯೂರು ಗ್ರಾಮ ಪಂಚಾಯಿತಿಗಳೂ 2021-22ನೇ ಸಾಲಿನಲ್ಲಿ ಕ್ರಮವಾಗಿ 4,863 ಮತ್ತು 4,511 ಮಾನವ ದಿನಗಳನ್ನು ಸೃಜನೆ ಮಾಡಿದ್ದವು.

ಪಡುಬಿದ್ರಿ ಪಂಚಾಯಿತಿ ಉತ್ತಮ ಸಾಧನೆ:

ಕಾಪು ತಾಲ್ಲೂಕು ವ್ಯಾಪ್ತಿಯಲ್ಲಿರುವ ಪಡುಬಿದ್ರಿ ಗ್ರಾಮ ಪಂಚಾಯಿತಿ ಸತತವಾಗಿ ಉತ್ತಮ ಮಾನವದಿನಗಳನ್ನು ಸೃಜಿಸುವ ಮೂಲಕ ತಾಲ್ಲೂಕಿಗೆ ಪ್ರಥಮ ಸ್ಥಾನ ಕಾಯ್ದುಕೊಂಡಿದೆ. 2022-23ನೇ ಸಾಲಿನಲ್ಲಿ 11,400ಕ್ಕೂ ಅಧಿಕ ಮಾನವ ದಿನಗಳನ್ನು ಸೃಜಿಸುವ ಮೂಲಕ ಸತತ ಎರಡನೇ ವರ್ಷವೂ ಕಾಪು ತಾಲೂಕಿನಲ್ಲಿ ಮೊದಲ ಸ್ಥಾನದಲ್ಲಿದೆ.

2021-22ನೇ ಸಾಲಿನಲ್ಲಿ ಪಡುಬಿದ್ರಿ ಗ್ರಾಮ ಪಂಚಾಯಿತಿ 10,807 ಮಾನವದಿನಗಳನ್ನು ಸೃಜನೆ ಮಾಡಿತ್ತು. ಈ ಬಾರಿ ಗುರಿ ಮೀರಿದ ಸಾಧನೆ ಮಾಡಿದೆ. ಬೆಳ್ಳೆ ಮತ್ತು ಶಿರ್ವ ಗ್ರಾಮ ಪಂಚಾಯಿತಿಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಅಲಂಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT