ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಡ್ಪಾಲು : ದನ ಕಳವು, ಒರ್ವ ಬಂಧನ

Published 10 ಜುಲೈ 2024, 6:31 IST
Last Updated 10 ಜುಲೈ 2024, 6:31 IST
ಅಕ್ಷರ ಗಾತ್ರ

ಹೆಬ್ರಿ: ನಾಡ್ಪಾಲು ಗ್ರಾಮದ ಬೆಳಾರ ಎಂಬಲ್ಲಿ ಮಂಗಳವಾರ ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರನ್ನು ಕಳವು ಮಾಡಿ ಗೂಡ್ಸ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದಾಗ ಓರ್ವನನ್ನು ಬಂಧಿಸಲಾಗಿದ್ದು, ವಾಹನ ವಶಪಡಿಸಿಕೊಳ್ಳಲಾಗಿದೆ.

ಮಧ್ಯಾಹ್ನ 1ರ ಸುಮಾರಿಗೆ ಗೂಡ್ಸ್‌ನಲ್ಲಿ ಚಾಲಕ ಹಬೀಬ್, ಬಶೀರ್ (ಬಚ್ಚಿ), ಆಸೀಫ್ ಇಕ್ಬಾಲ್ ಜಾನುವಾರು ಕಳವು ಮಾಡಿ ತೆಗೆದುಕೊಂಡು ಹೋಗುತ್ತಿದ್ದಾಗ ಸೊಮೇಶ್ವರ ವನ್ಯಜೀವಿ ವಲಯದ ಉಪವಲಯ ಅರಣ್ಯಾಧಿಕಾರಿ ಎಸ್. ಮೊಹಮ್ಮದ್ ಜುನೇದ್ ಅಖ್ತರ್ ವಾಹನ ತಡೆಗಟ್ಟಿ ನಿಲ್ಲಿಸುವಂತೆ ಸೂಚಿಸಿದರು. ವಾಹನ ನಿಲ್ಲಿಸದೆ ಅತಿ ವೇಗದಿಂದ ಚಲಾಯಿಸಿಕೊಂಡು ಹೋಗಿದ್ದು, ಅಜ್ಜೋಳ್ಳಿ ದರ್ಖಾಸು ಸೇತುವೆ ಬಳಿ ಚಾಲಕ ಹಬೀಬ್, ಬಶೀರ್ ವಾಹನದಿಂದ ಜಿಗಿದು ತಪ್ಪಿಸಿಕೊಂಡಿದ್ದಾರೆ. ಆಸೀಫ್ ಇಕ್ಬಾಲ್, ಗೂಡ್ಸ್ ವಾಹನ, ಮೃತಪಟ್ಟ ಜಾನುವಾರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಾಗಿದೆ.

ಮುದ್ರಾಡಿ: ಆರಾಧನಾ ಉತ್ಸವ

ಹೆಬ್ರಿ: ಮುದ್ರಾಡಿ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ದೇವಸ್ಥಾನದಲ್ಲಿ ಜುಲೈ 18ರಂದು ಆರಾಧನ ಉತ್ಸವ ಸೇವೆ ನಡೆಯಲಿದೆ. ಮುದ್ರಾಡಿ ಕಬ್ಬಿನಾಲೆ ಬಚ್ಚಪ್ಪು ಅಡ್ಕ ವ್ಯಾಪ್ತಿಯ ಭಜನಾ ಮಂಡಳಿಯಿಂದ ದ್ವಂದ್ವ ಭಜನೆ ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT