ರಿಯಾಜ್ ಮಣಿಪಾಲದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರು. ಶಿಫಾ ತಂದೆ ತಾಯಿ ಮದುವೆಗೆ ಮುಂಚೆ ತೀರಿಕೊಂಡಿದ್ದರು. ಆ ವೇಳೆ ಬಿಎಎಂಎಸ್ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದ ಈಕೆ ಓದು ನಿಲ್ಲಿಸಿ ರಿಯಾಜ್ ಅವರನ್ನು ವಿವಾಹವಾಗಿದ್ದರು. ಈಚೆಗಷ್ಟೇ ಶಿವಮೊಗ್ಗಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಾಗ ಅವರ ಎರಡೂವರೆ ತಿಂಗಳ ಮಗು ತೀರಿಕೊಂಡಿತ್ತು. ರಿಯಾಜ್ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಶಿಫಾ ಮೊಬೈಲ್ ಮನೆಯಲ್ಲೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ.